ಸರಕಾರಿ ಸ್ವತ್ತುಗಳ ನಗದೀಕರಣ ಯೋಜನೆ (NMP) ಭಾರತದ ಸುಲಿಗೆ-ಕಾರ್ಪೊರೇಟ್ ಕಂಪೆನಿಗಳಿಗೆ ಗುತ್ತಿಗೆ!

Update: 2021-08-31 19:30 GMT

ಈ NMP ಯೋಜನೆಯಲ್ಲಿ ಸರಕಾರವು ತಾನೇ ದೇಶದ ಜನರ ತೆರಿಗೆ ದುಡ್ಡನ್ನು ಬಳಸಿ ಯೋಜನೆಯನ್ನು ನಿರ್ಮಿಸಿರುತ್ತದೆ. ಅದು ಸಂಪೂರ್ಣವಾಗಿ ಚಾಲ್ತಿಯಲ್ಲೂ ಇರುತ್ತದೆ. ಆದರೆ ಅದರ ನಿರ್ವಹಣೆಯನ್ನು ಮಾಡಿ ಲಾಭ ಮಾಡುವ ಅವಕಾಶವನ್ನು ಮಾತ್ರ ಖಾಸಗಿಯವರಿಗೆ ಬಿಟ್ಟುಕೊಡಲಾಗುತ್ತದೆ. ನಿರ್ವಹಣೆಯ ಗುತ್ತಿಗೆ ಪಡೆದುಕೊಂಡ ಕಾರ್ಪೊರೇಟ್ ಗುತ್ತಿಗೆದಾರರು ಬಳಕೆದಾರರಿಂದ ಶುಲ್ಕ ವಸೂಲಿ ಮಾಡಿ ಸರಕಾರಕ್ಕೆ ಒಕ್ಕಾಲು ಕೊಟ್ಟು ಮುಕ್ಕಾಲು ತಾವೇ ಉಳಿಸಿಕೊಳ್ಳುವ ಯೋಜನೆಯಿದು. ಅಂದರೆ ಸರಕಾರವೇ ಅಡುಗೆ ಮಾಡಿ, ಎಲೆಯನ್ನೂ ಹಾಕಿರುತ್ತದೆ. ಖಾಸಗಿಯವರದ್ದು ಊಟಕ್ಕೆ ಬರುವ ಗ್ರಾಹಕರ ಹತ್ತಿರ ದುಡ್ಡು ವಸೂಲಿ ಮಾಡುವ ಕೆಲಸವಷ್ಟೆ. ಎಷ್ಟು ದುಡ್ಡು ವಸೂಲಿ ಮಾಡಬೇಕೆಂಬ ಅಧಿಕಾರವು ಖಾಸಗಿಯವರಿಗೆ ಬಿಟ್ಟುಕೊಡಲಾಗಿದೆ.


 ಭಾರತವನ್ನು ಸ್ವದೇಶಿ ಮತ್ತು ವಿದೇಶಿ ಕಾರ್ಪೊರೇಟ್ ಕಂಪೆನಿಗಳಿಗೆ ಸಗಟಾಗಿ ಮಾರಿಬಿಡಲು ಹಠತೊಟ್ಟಿರುವ ದೇಶಭಕ್ತ ಮೋದಿ ಸರಕಾರ, ಆ ನಿಟ್ಟಿನಲ್ಲಿ ಮೊನ್ನೆ ಮತ್ತೊಂದು ಮಹಾ ಯೋಜನೆಯನ್ನು ಘೋಷಿಸಿದೆ.
National Monetisation Pipeline (NMP -ರಾಷ್ಟ್ರೀಯ ನಗದೀಕರಣ ಯೋಜನೆ) ಎಂಬ ಹೆಸರಿನ ಈ ಯೋಜನೆಯಡಿಯಲ್ಲಿ ದೇಶದ ಲಕ್ಷಾಂತರ ಕೋಟಿ ಮೌಲ್ಯದ ಸಾರ್ವಜನಿಕ ಸ್ವತ್ತಿನ ನಿರ್ವಹಣೆ- ಉತ್ಪಾದನೆ-ಸೇವಾ ಪ್ರಾಯೋಜನೆಗಳ ಅಧಿಕಾರವನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗುವುದು ಮತ್ತು ಅದಕ್ಕೆ ಪ್ರತಿಯಾಗಿ ಖಾಸಗಿ ಕಂಪೆನಿಗಳು ನೀಡುವ ಶುಲ್ಕಗಳಿಂದ ಮುಂದಿನ ನಾಲ್ಕು ವರ್ಷಗಳಲ್ಲಿ ಅಂದಾಜು 6 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸುವ ಉದ್ದೇಶವನ್ನು ಮೋದಿ ಸರಕಾರ ಪ್ರಕಟಿಸಿದೆ. ಅಂದರೆ ಇದೂ ಕೂಡಾ ಈಗಾಗಲೇ ದೊಡ್ಡ ಮಟ್ಟದಲ್ಲಿ ವಿಫಲವಾಗಿರುವ  PPP (ಸಾರ್ವಜನಿಕ-ಖಾಸಗಿ ಸಹಯೋಗ) ಯೋಜನೆಯ ಮತ್ತೊಂದು ರೂಪವೇ ಅಗಿದೆ. ಗಳಿಸಿದ-ಉಳಿಸಿದ ಸ್ವತ್ತನ್ನು ಮಾರಿ ದೈನಂದಿನ ಖರ್ಚನ್ನು ತೂಗಿಸುವ ಹಿಂದಿನ ಸರಕಾರಗಳ ಮನೆಮುರುಕ ಆರ್ಥಿಕ ನೀತಿಯ ಮುಂದುವರಿಕೆಯೇ ಆಗಿದೆ..

ಮನೆಮುರುಕ ನೀತಿಗಳು- ಆತ್ಮವಂಚಕ ಸಮರ್ಥನೆಗಳು

ಆದರೆ ಮೋದಿ ಸರಕಾರ ತನ್ನ ದೊಡ್ಡ ಆಸ್ತಿಯಾಗಿರುವ ಬೆನ್ನುಮೂಳೆಯಿಲ್ಲದ ಪಂಡಿತ ಗಣ ಹಾಗೂ ಮಾರಿಕೊಂಡ ಮಾಧ್ಯಮ ಬಣ ಈ ಮನೆಮುರುಕ ಯೋಜನೆಯನ್ನು ಕೂಡಾ ಮಾಸ್ಟರ್‌ಸ್ಟ್ರೋಕ್ ಎಂಬಂತೆ ಬಣ್ಣಿಸುತ್ತಾ ಹಲವಾರು ಅತಿರಂಜಿತ ಸಮರ್ಥನೆಗಳನ್ನು ಮುಂದಿಡುತ್ತಿವೆ. ಅದರಲ್ಲಿ ಮೊದಲನೆಯದು ಈ ನಗದೀಕರಣ ಯೋಜನೆಯಲ್ಲಿ ಯಾವ ಸಾರ್ವಜನಿಕ ಆಸ್ತಿಪಾಸ್ತಿಗಳ ಒಡೆತನವನ್ನೇನೂ ಖಾಸಗಿಯವರಿಗೆ ಪರಭಾರೆ ಮಾಡುತ್ತಿಲ್ಲ. ಬದಲಿಗೆ ಅವುಗಳ ನಿರ್ವಹಣೆಯನ್ನು ಮಾತ್ರ ಗುತ್ತಿಗೆ ನೀಡಿ, ಅವಧಿ ಮುಗಿದ ನಂತರ ಒಡೆತನವನ್ನು ಸರಕಾರವು ಹಿಂಪಡೆಯಲಿದೆ ಎಂಬ ಅರ್ಧ ಸತ್ಯ. ಎರಡನೆಯದು, ಸರಕಾರದ ಸುಪರ್ದಿಯಲ್ಲಿರುವ ಸಾಕಷ್ಟು ಆಸ್ತಿಪಾಸ್ತಿಗಳು ಸಂಪೂರ್ಣ ಉಪಯೋಗವಾಗುತ್ತಿಲ್ಲ. ಉದಾಹರಣೆಗೆ ಸರಕಾರಿ ಉದ್ಯಮಗಳ ಒಡೆತನದಲ್ಲಿ ಖಾಲಿ ಬಿದ್ದಿರುವ ಭೂಮಿ ಇದೆ. ಹಾಗೆಯೇ ಪಾರಂಪರಿಕ ಕಟ್ಟಡಗಳಿವೆ. ಇವುಗಳು ಯಾವುದೇ ಉತ್ಪಾದಕತೆ ಇಲ್ಲದೆ ವ್ಯರ್ಥವಾಗಿವೆ. ಅವುಗಳನ್ನು ಖಾಸಗಿಯವರಿಗೆ ಗುತ್ತಿಗೆಗೆ ಬಿಟ್ಟುಕೊಟ್ಟು ಶುಲ್ಕ ವಿಧಿಸಿದರೆ ಸರಕಾರಕ್ಕೆ ಆದಾಯ ಬರುತ್ತದೆ. ಆದ್ದರಿಂದ ಅದರಲ್ಲಿ ತಪ್ಪೇನಿದೆ ಎಂಬ ಹಸಿ ಸುಳ್ಳು.

ಒಡೆತನವಲ್ಲ ಗುತ್ತಿಗೆ- ಕಾಗದ ಸರಕಾರದ್ದು, ಖಜಾನೆ ಖಾಸಗಿಗಳದ್ದು

ಮೊದಲನೆಯದಾಗಿ, ಈ ಗುತ್ತಿಗೆ/ನಗದೀಕರಣ ಯೋಜನೆಯು ರೂಪುಗೊಂಡಿದ್ದೇ ಖಾಸಗೀಕರಣ ಯೋಜನೆಗೆ ಖಾಸಗಿಯವರಿಂದ ಸೂಕ್ತ ಪ್ರತಿಕ್ರಿಯೆ ಬರದಿದ್ದರಿಂದ. ಸರಕಾರಿ ಕಂಪೆನಿಗಳು, ಅದಕ್ಷ, ನಷ್ಟ ಮಾಡುತ್ತಿವೆ ಎಂಬ ಅಪಪ್ರಚಾರವನ್ನು ಎಲ್ಲಾ ಸರಕಾರಗಳು ಮಾಡುತ್ತಾ ಬಂದಿವೆ. ಆದರೆ ಅಸಲಿ ಸಂಗತಿಯೆಂದರೆ, ಕೇಂದ್ರ ಸರಕಾರದ ಒಡೆತನದಲ್ಲಿರುವ ಅಂದಾಜು 260 ಸಾರ್ವಜನಿಕ ಉದ್ಯಮಗಳಲ್ಲಿ 174 ಉದ್ಯಮಗಳು ಲಾಭ ಮಾಡುತ್ತಿವೆ. ಅವುಗಳಲ್ಲಿ ಬಿಪಿಸಿಎಲ್, ಒಎನ್‌ಜಿಸಿಯಂತಹ ಹತ್ತು ಉದ್ಯಮಗಳು 2019ರಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಲಾಭ ಮಾಡಿದ್ದ ಮಹಾರತ್ನ ಕಂಪೆನಿಗಳು. ಒಟ್ಟಾರೆ ಈ ಉದ್ಯಮಗಳು 14 ಲಕ್ಷ ಜನರಿಗೆ ಉದ್ಯೋಗ ಕೊಟ್ಟಿರುವುದೂ ಅಲ್ಲದೆ ಪ್ರತಿವರ್ಷ ಸರಕಾರಕ್ಕೆ ಅಂದಾಜು 5-7 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ತೆರಿಗೆ, ಡಿವಿಡೆಂಡ್ ರೂಪದಲ್ಲಿ ಸಲ್ಲಿಸುತ್ತಿವೆ. 2019ರಲ್ಲಿ ಈ ಲಾಭದಾಯಕ 174 ಸರಕಾರಿ ಕಂಪೆನಿಗಳು 3 ಲಕ್ಷ ಕೋಟಿ ನಿವ್ವಳ ಲಾಭ ಮಾಡಿದ್ದರೆ, ಕೇವಲ 84 ಕಂಪೆನಿಗಳು ಮಾತ್ರ 35,000 ಕೋಟಿ ರೂ. ಗಳ ಸಾಲವನ್ನು ಅನುಭವಿಸುತ್ತಿದ್ದವು. ಅವುಗಳಲ್ಲೂ ಸರಕಾರವೇ ಉದ್ದೇಶಪೂರ್ವಕವಾಗಿ ಕತ್ತುಹಿಸುಕಿ ನಷ್ಟಕ್ಕೆ ದೂಡಿದ್ದ ಬಿಎಸ್‌ಎನ್‌ಎಲ್‌ನಂತಹ ಸರಕಾರಿ ಕಂಪೆನಿಗಳು ಸೇರಿಕೊಂಡಿವೆ. ಅದೇನೇ ಇರಲಿ ಒಟ್ಟಾರೆಯಾಗಿ ಸರಕಾರದ ಒಡೆತನದಲ್ಲಿರುವ ಬಹುಪಾಲು ಕಂಪೆನಿಗಳು ಲಾಭವನ್ನೇ ಮಾಡುತ್ತಿವೆ.

ಸರಕಾರಕ್ಕೆ ಲಾಭ ಹಾಗೂ ಆದಾಯಗಳನ್ನು ತರುತ್ತಿವೆ ಮತ್ತು ಉದ್ಯೋಗಗಳನ್ನು ನೀಡುತ್ತಿವೆ. ಸರಕಾರಿ ಒಡೆತನದಲ್ಲಿರುವ ಸಂಸ್ಥೆಗಳಾದ್ದರಿಂದ ಕಡ್ಡಾಯವಾಗಿ ಮೀಸಲಾತಿ ಅನುಸರಿಸಬೇಕಿರುವುದರಿಂದ ಈ ದೇಶದ ದಲಿತ-ಹಿಂದುಳಿದ ಸಮುದಾಯಗಳಿಗೂ ಉದ್ಯೋಗ ದೊರಕುತ್ತಿದೆ. ಹಾಗೆ ನೋಡಿದರೆ ಸರಕಾರಿ ಸಂಸ್ಥೆಗಳು ಲಾಭದಾಯಕವಾಗಿರುವುದಕ್ಕೆ ಇದೂ ಒಂದು ಕಾರಣ. ಒಟ್ಟಿನಲ್ಲಿ ಸರಕಾರಗಳು, ಖಾಸಗಿ ಪಂಡಿತರು ಏನೇ ಅಪಪ್ರಚಾರ ಮಾಡುತ್ತಿದ್ದರೂ ಸರಕಾರಿ ಸಂಸ್ಥೆಗಳು ದೇಶನಿರ್ಮಾಣಕ್ಕೆ ದೊಡ್ಡ ಕೊಡುಗೆಯನ್ನೇ ಕೊಡುತ್ತಾ ಬಂದಿವೆ. ಆದರೆ ಮೋದಿ ಸರಕಾರ ‘‘ಕಡಿಮೆ ಸರಕಾರ-ಹೆಚ್ಚಿನ ಆಡಳಿತ’’ ಎಂಬ ಕಾರ್ಪೊರೇಟ್ ಘೋಷಣೆಯ ಮುಸುಕಿನಲ್ಲಿ ಹಿಂದಿನ ಸರಕಾರಗಳಿಗಿಂತ ವೇಗವಾಗಿ ಎಲ್ಲಾ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡಲು ಒಂದೇ ಸಮನೆ ಪ್ರಯತ್ನ ಮಾಡುತ್ತಲೇ ಇದೆ. 2021-22 ರ ಬಜೆಟ್‌ನಲ್ಲಂತೂ ಎಲ್ಲಾ ಸರಕಾರಿ ಸಂಸ್ಥೆಗಳನ್ನು ಮುಚ್ಚುವ ಅಥವಾ ಖಾಸಗೀಕರಿಸುವ ಹಾಗೂ ಸರಕಾರಿ ಆಸ್ತಿಪಾಸ್ತಿಗಳನ್ನು ಖಾಸಗಿಯವರಿಗೆ ಬಿಟ್ಟುಕೊಟ್ಟು ನಗದೀಕರಿಸುವ ದೇಶಮುರುಕ ಯೋಜನೆಗಳನ್ನು ಬಹಿರಂಗವಾಗಿಯೇ ಘೋಷಿಸಲಾಗಿದೆ. ಆದರೆ ಖಾಸಗಿ ಸಂಸ್ಥೆಗಳು ಉದ್ಯಮದಲ್ಲಿರುವುದೇ ಲಾಭ ಮಾಡಲು. ಹೀಗಾಗಿ ಅವು ನಷ್ಟದಲ್ಲಿರುವ ಕಂಪೆನಿಗಳನ್ನೇಕೆ ಕೊಂಡಾವು? (ಇಲ್ಲಿ ಸರಕಾರಿ ಕ್ಷೇತ್ರದ ಅದಕ್ಷತೆ ಮತ್ತು ಖಾಸಗಿಯವರ ಸಾಮರ್ಥ್ಯ ಎಂದೆಲ್ಲಾ ಹೇಳಿಕೊಟ್ಟ ಪಾಠವನ್ನು ಒಪ್ಪಿಸುವ ಮೋದಿಭಕ್ತರು ಗಮನಿಸಲೇಬೇಕಾದ ಒಂದು ಮುಖ್ಯವಾದ ಅಂಶವಿದೆ. ಮೋದಿ ಸರಕಾರ ಖಾಸಗೀಕರಿಸುತ್ತಿರುವುದು ನಷ್ಟ ಎದುರಿಸುತ್ತಿರುವ ಕಂಪೆನಿಗಳನ್ನಲ್ಲ. ಲಾಭ, ಉದ್ಯೋಗ ನೀಡುತ್ತಿರುವ ಸರಕಾರಿ ಮಹಾರತ್ನಗಳನ್ನು.)

ಆದ್ದರಿಂದ ಮೋದಿ ಸರಕಾರ ವರ್ಷಕ್ಕೆ ರೂ. 5,000 ಕೋಟಿ ಲಾಭ ಮಾಡುತ್ತಿರುವ ಮತ್ತು 1.5 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಬಿಪಿಸಿಎಲ್‌ನಂತಹ ಲಾಭದಾಯಕ ನವರತ್ನಗಳನ್ನೇ ಮಾರಲು ಮುಂದಾಯಿತು. ಆದರೂ ಭಾರತದ ಈ ಕಾರ್ಪೊರೇಟ್ ಉದ್ಯಮಪತಿಗಳು ಲಾಭದಾಯಕ ಕಂಪೆನಿಗಳನ್ನು ಕೊಳ್ಳಲು ಕೂಡಾ ಹಣಹೂಡಿಕೆ ಮಾಡಲು ಸಿದ್ಧರಿಲ್ಲ. ಅದಕ್ಕೆ ಬೇಕಾದ ಬಂಡವಾಳ ಸಾಲವನ್ನು ಕಡಿಮೆ ದರದಲ್ಲಿ ಬ್ಯಾಂಕುಗಳು ಕೊಡಲು ಮುಂದೆ ಬಂದರೂ ಸಾಲ ತೆಗೆದುಕೊಂಡು ಲಾಭ ಮಾಡಿ ತೀರಿಸುವ ಸಣ್ಣ ಉದ್ಯಮ ಸಹಜ ರಿಸ್ಕೂ ಭಾರತದ ದೊಡ್ಡ ಬಂಡವಾಳಿಗರಿಗೆ ಬೇಕಿಲ್ಲ. ಆದ್ದರಿಂದಲೇ ಸರಕಾರವು ಖಾಸಗೀಕರಣದಿಂದ ಸಂಪನ್ಮೂಲ ಸಂಗ್ರಹಿಸಬೇಕೆಂದು ಪ್ರತಿವರ್ಷ ಹಾಕಿಕೊಳ್ಳುವ ಗುರಿಗಳ ಕಾಲು ಭಾಗವನ್ನೂ ಸಾಧಿಸಲಾಗಿಲ್ಲ. ಈ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದೇ ಈ NMP-ಸರಕಾರಿ-ಆಸ್ತಿಪಾಸ್ತಿಗಳ ಗುತ್ತಿಗೆಯಾಧಾರಿತ ನಗದೀಕರಣ ಯೋಜನೆ.

ಬಂಡವಾಳ ಜನರದ್ದು- ಲಾಭ ಮಾತ್ರ ಕಾರ್ಪೊರೇಟ್‌ಗಳದ್ದು!
 ಈ NMP ಯೋಜನೆಯಲ್ಲಿ ಸರಕಾರವು ತಾನೇ ದೇಶದ ಜನರ ತೆರಿಗೆ ದುಡ್ಡನ್ನು ಬಳಸಿ ಯೋಜನೆಯನ್ನು ನಿರ್ಮಿಸಿರುತ್ತದೆ. ಅದು ಸಂಪೂರ್ಣವಾಗಿ ಚಾಲ್ತಿಯಲ್ಲೂ ಇರುತ್ತದೆ. ಆದರೆ ಅದರ ನಿರ್ವಹಣೆಯನ್ನು ಮಾಡಿ ಲಾಭ ಮಾಡುವ ಅವಕಾಶವನ್ನು ಮಾತ್ರ ಖಾಸಗಿಯವರಿಗೆ ಬಿಟ್ಟುಕೊಡಲಾಗುತ್ತದೆ. ನಿರ್ವಹಣೆಯ ಗುತ್ತಿಗೆ ಪಡೆದುಕೊಂಡ ಕಾರ್ಪೊರೇಟ್ ಗುತ್ತಿಗೆದಾರರು ಬಳಕೆದಾರರಿಂದ ಶುಲ್ಕ ವಸೂಲಿ ಮಾಡಿ ಸರಕಾರಕ್ಕೆ ಒಕ್ಕಾಲು ಕೊಟ್ಟು ಮುಕ್ಕಾಲು ತಾವೇ ಉಳಿಸಿಕೊಳ್ಳುವ ಯೋಜನೆಯಿದು. ಅಂದರೆ ಸರಕಾರವೇ ಅಡುಗೆ ಮಾಡಿ, ಎಲೆಯನ್ನೂ ಹಾಕಿರುತ್ತದೆ. ಖಾಸಗಿಯವರದ್ದು ಊಟಕ್ಕೆ ಬರುವ ಗ್ರಾಹಕರ ಹತ್ತಿರ ದುಡ್ಡು ವಸೂಲಿ ಮಾಡುವ ಕೆಲಸವಷ್ಟೆ. ಎಷ್ಟು ದುಡ್ಡು ವಸೂಲಿ ಮಾಡಬೇಕೆಂಬ ಅಧಿಕಾರವು ಖಾಸಗಿಯವರಿಗೆ ಬಿಟ್ಟುಕೊಡಲಾಗಿದೆ.

ಖಜಾನೆ ಖಾಲಿಯಾದ ಮೇಲೆ ಒಡೆತನದ ವಾಪಸಾತಿ

ಈ ಖಾಸಗಿ ಕಂಪೆನಿಗಳು ಮಾಡುವ ಈ ಸುಲಿಗೆಗೆ ನಿರ್ವಹಣಾ ಗುತ್ತಿಗೆ ಎಂದು ಹೆಸರಿಡಲಾಗಿದೆ. ಗುತ್ತಿಗೆಯ ಅವಧಿ ಹೆದ್ದಾರಿ ನಿರ್ವಹಣೆ ಕ್ಷೇತ್ರಗಳಲ್ಲಿ 4-5 ವರ್ಷಗಳಿದ್ದರೆ, ಕಲ್ಲಿದ್ದಲು, ಟೆಲಿಕಾಂ, ರೈಲ್ವೆ ಆಸ್ತಿ ನಿರ್ವಹಣೆಯ ಗುತ್ತಿಗೆಗಳಲ್ಲಿ 30-60 ವರ್ಷಗಳಾಗಲಿವೆ.

ಕಲ್ಲಿದ್ದಲು ಕ್ಷೇತ್ರದ ನಿರ್ವಹಣೆಯೆಂದರೆ ಸರಕಾರಕ್ಕೆ ಇವತ್ತಿನ ದರದಲ್ಲಿ ಶುಲ್ಕವನ್ನು ಪಾವತಿ ಮಾಡಿ, ಮುಂದಿನ 60 ವರ್ಷಗಳ ಕಾಲ ಆ ಗಣಿಗಳಲ್ಲಿರುವ ಕಲ್ಲಿದ್ದಲನ್ನು ಹೊರತೆಗೆದು, ತಮಗಿಷ್ಟ ಬಂದ ಮಾರುಕಟ್ಟೆಗೆ ತಮಗಿಷ್ಟ ಬಂದ ಬೆಲೆಗೆ ಮಾರಿಕೊಳ್ಳುವ ಅಧಿಕಾರ. 30-60 ವರ್ಷಗಳ ನಂತರ ಆ ಗಣಿಗಳ ಒಡೆತನವನ್ನು ಸರಕಾರಕ್ಕೆ ಮರಳಿಸಿದಾಗ ಆ ಗಣಿಗಳು ಖಾಲಿಯಾಗಿರುವುದಿಲ್ಲವೇ? ಆಗ ಒಡೆತನ ಸರಕಾರದ್ದು ಎಂಬ ಹುಂಬ ವಾದಕ್ಕೆ ಏನಾದರೂ ಅರ್ಥವಿದೆಯೇ? ಟೆಲಿಕಾಂ ಕ್ಷೇತ್ರದಲ್ಲಿ ಸ್ಪೆಕ್ಟ್ರಂ ಮತ್ತು ಟವರುಗಳ ಒಡೆತನದಲ್ಲಿ ಯಾವ ಲಾಭವೂ ಇಲ್ಲ. ಲಾಭವಿರುವುದು ಅದರ ಬಳಕೆಯಲ್ಲಿ ಮಾತ್ರ. ಆದರೆ ಬಳಕೆಯ ಅಧಿಕಾರವನ್ನು ಖಾಸಗಿಯವರಿಗೆ ಕೊಟ್ಟು ಒಡೆತನವನ್ನು ಮಾತ್ರ ಉಳಿಸಿಕೊಳ್ಳುವುದೆಂದರೆ ಒಡವೆಗಳಿರುವ ಪೆಟ್ಟಿಗೆಯನ್ನು ಖಾಸಗಿಯವರು ಹೊತ್ತೊಯ್ಯಲು ಬಿಟ್ಟು ಅದರ ಬೀಗದ ಕೀಯನ್ನು ಮಾತ್ರ ಇಟ್ಟುಕೊಂಡಂತಲ್ಲವೇ? ಹೆಚ್ಚೆಂದರೆ ಈ ಗುತ್ತಿಗೆದಾರ ಕಂಪೆನಿಗಳು ಒಂದೇ ಬಾರಿಗೆ ಅಷ್ಟೂ ಗುತ್ತಿಗೆ ಅವಧಿಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಟ್ಟು ಶುಲ್ಕ ಸಂಗ್ರಹದ ಮೂಲಕ ಮುಂದಿನ ನಾಲ್ಕು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಗಳನ್ನು ಸಂಗ್ರಹಿಸಬಹುದು ಎಂಬುದು ಸರಕಾರದ ಇರಾದೆ. ಆದರೆ ಆ ರೀತಿ ಒಟ್ಟು ಮೊತ್ತದ ಶುಲ್ಕ ಕೊಡಲು ಬೇಕಾದ ಹಣವನ್ನು ಕೂಡಾ ಭಾರತದ ಬ್ಯಾಂಕು ಹಾಗೂ ಇತರ ಹಣಕಾಸು ಸಂಸ್ಥೆಗಳೇ ಅಗ್ಗದ ದರದಲ್ಲಿ ಸಾಲ ನೀಡಲಿವೆ. ಅಂದಮೇಲೆ ಈ ನಗದೀಕರಣ ಯೋಜನೆಯು ಕನಿಷ್ಠ ಬಂಡವಾಳ ಹೂಡಿಕೆಯನ್ನು ಮಾಡಲು ಸಿದ್ಧವಿಲ್ಲದ ಭಾರತದ ದೊಡ್ಡ ಕಾರ್ಪೊರೇಟು ಕಂಪೆನಿಗಳು ಜನರನ್ನು ಸುಲಿದು ಅಗಾಧ ಹಾಗೂ ಸುಲಭದ ಲಾಭ ಮಾಡಲು ಹಾದಿಯಾಗಿರುವ ಯೋಜನೆಯಲ್ಲವೇ?

ಬಳಕೆಯಾಗದ ಆಸ್ತಿಗಳಲ್ಲ- ಸುಂಕಕ್ಕೆ ಬಲಿಯಾಗದ ಆಸ್ತಿಗಳು

ಎರಡನೆಯದಾಗಿ ಹಾಗೂ ಅತಿಮುಖ್ಯವಾಗಿ ಈ ನಗದೀಕರಣ ಯೋಜನೆಯು ವ್ಯರ್ಥವಾಗಿರುವ ಸರಕಾರಿ ಆಸ್ತಿಪಾಸ್ತಿಗಳನ್ನು ಲಾಭದಾಯಕವಾಗಿ ಬಳಸಿಕೊಳ್ಳಲು ರೂಪಿಸಲಾಗಿರುವ ಯೋಜನೆ ಅಲ್ಲವೇ ಅಲ್ಲ. ಆ ರೀತಿಯ ರಿಸ್ಕುಗಳಿದ್ದರೆ ಭಾರತದ ಕಾರ್ಪೊರೇಟ್‌ಪತಿಗಳು ಈ ಯೋಜನೆಯ ಹತ್ತಿರಕ್ಕೂ ಬರುತ್ತಿರಲಿಲ್ಲ. ಈಗಾಗಲೇ ಗಮನಿಸಿದಂತೆ ಈ ಎಲ್ಲಾ ಯೋಜನೆಗಳು ಸರಕಾರವೇ ನಿರ್ಮಿಸಿರುವ ಬಳಕೆಯಲ್ಲಿ ಇರುವ ಯೋಜನೆಗಳೇ.

ಈ ನಿಟ್ಟಿನಲ್ಲಿ ಭಾರತದ ನೀತಿ ಆಯೋಗವು ಬಿಡುಗಡೆ ಮಾಡಿರುವ ಎರಡು ಸಂಪುಟಗಳ National Monetisation Pipline- Asset Pipeline ನೀಲನಕ್ಷೆಯ ಪ್ರಕಾರ: ನಾಲ್ಕು ಪಥಗಳಿಗಿಂತ ಹೆಚ್ಚಿರುವ ಈಗಾಗಲೇ ಟೋಲ್ ಶುಲ್ಕವನ್ನು ಸಂಗ್ರಹಿಸುತ್ತಿರುವ 26,700 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿಗಳು, ಹಾಲಿಬಳಕೆಯಲ್ಲಿರುವ 400 ರೈಲ್ವೆ ಸ್ಟೇಶನ್‌ಗಳು, 150 ಟ್ರೈನುಗಳು ಮತ್ತು ಕೆಲವು ವಲಯಗಳ ರೈಲ್ವೆ ಟ್ರಾಕುಗಳು, 42,300 ಕಿ.ಮೀ. ಉದ್ದದ ವಿದ್ಯುತ್ ಟ್ರಾನ್ಸ್‌ಮಿಷನ್ ಲೈನುಗಳು, ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಒಡೆತನದಲ್ಲಿರುವ ಟವರ್‌ಗಳು, 160 ಕಲ್ಲಿದ್ದಲು ಗಣಿಗಳು.. ಸರಕಾರವು ನಿರೀಕ್ಷಿಸುತ್ತಿರುವ 6 ಲಕ್ಷ ಕೋಟಿಗಳಲ್ಲಿ 4 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿನ ಆದಾಯ ಇವುಗಳಿಂದಲೇ ಬರಬೇಕು. ಇನ್ನುಳಿದಂತೆ 8,000 ಕಿ.ಮೀ. ಉದ್ದದ ಗ್ಯಾಸ್ ಪೈಪ್ ಲೈನುಗಳು, 4,000 ಕಿ.ಮೀ. ಉದ್ದದ ತೈಲ ಪೈಪ್ ಲೈನುಗಳು, 21 ವಿಮಾನ ನಿಲ್ದಾಣಗಳು ಮತ್ತು 31 ಬಂದರುಗಳು ಹಾಗೂ ರೈಲ್ವೆ ಸ್ಟೇಡಿಯಂಗಳು. (https://www.niti.gov.in/sites/default/files/2021-08/Vol_2_NATIONAL_MONETISATION_PIPELINE_23_Aug_2021.pdf) 

ಇವುಗಳಲ್ಲಿ ಯಾವೊಂದೂ ಬಳಕೆಯಾಗದ ಅಥವಾ ಸಂಪೂರ್ಣ ಬಳಕೆಯಾಗದ ಸಾರ್ವಜನಿಕ ಸ್ವತ್ತುಗಳಲ್ಲ. ಉದಾಹರಣೆಗೆ ಸರಕಾರವು ನಿರೀಕ್ಷಿಸುತ್ತಿರುವ ಆದಾಯದ ಶೇ. 25ರಷ್ಟು ಆದಾಯವನ್ನು ತರಬೇಕಿರುವ 26,700 ಕಿ.ಮೀ. ಹೆದ್ದಾರಿಯನ್ನು ಈಗಾಗಲೇ ಜನರ ತೆರಿಗೆಯಿಂದ ಕಟ್ಟಲಾಗಿದೆ. ಈಗಾಗಲೇ ಅದರಲ್ಲಿ ಬಹುಪಾಲು ಸ್ಥಳಗಳಲ್ಲಿ ಶುಲ್ಕವನ್ನು ಕೂಡಾ ಸರಕಾರ ಸಂಗ್ರಹಿಸುತ್ತಿದೆ. ಹಾಗೆಯೇ ವಿದ್ಯುತ್ ವಿತರಣಾ ಲೈನುಗಳು, ರೈಲ್ವೆ ಟ್ರಾಕುಗಳು..ಇತ್ಯಾದಿ.. ವಾಸ್ತವದಲ್ಲಿ ಖಾಸಗಿ ಕಂಪೆನಿಗಳು, ಅದರಲ್ಲೂ ಭಾರತದ ದೊಡ್ಡ ಕಾರ್ಪೊರೇಟಿಗರು ತಮ್ಮ ಹೂಡಿಕೆಗೆ ದುಪ್ಪಟ್ಟು ಲಾಭ ಕಂಡರೆ ಮಾತ್ರ ಹೂಡಿಕೆ ಮಾಡುತ್ತವೆ. ಈ ನಗದೀಕರಣ ಯೋಜನೆಯಲ್ಲೂ ಆ ರೀತಿ ಜನರನ್ನು ಬೇಕಾಬಿಟ್ಟಿ ಸುಲಿದು ದುಪ್ಪಟ್ಟು ಲಾಭವನ್ನು ಮಾಡುವ ಅವಕಾಶವನ್ನು ಸರಕಾರ ಮಾಡಿಕೊಟ್ಟಿದೆ.

ಲಂಗುಲಗಾಮಿಲ್ಲದೆ ಹೆಚ್ಚಾಗುವ ಜನರ ಸುಲಿಗೆ
ಉದಾಹರಣೆಗೆ, ಸರಕಾರವು ನಿರೀಕ್ಷಿಸುತ್ತಿರುವ 6 ಲಕ್ಷ ಕೋಟಿ ರೂ. ಆದಾಯದಲ್ಲಿ 1.6 ಲಕ್ಷ ಕೋಟಿ ರೂ.ಗಳು 26,700 ಕಿ.ಮೀ. ಹೆದ್ದಾರಿ ನಿರ್ವಹಣೆಯಿಂದ ಬರಲಿದೆ. ನೀತಿ ಆಯೋಗದ ನೀಲ ನಕ್ಷೆಯ ಪ್ರಕಾರ ಈ ನಿರ್ವಹಣಾ ಒಪ್ಪಂದವು  TOT (Toll-Operate-Transfer- ಶುಲ್ಕ ವಿಧಿಸು-ನಿರ್ವಹಿಸು-ಹಿಂದಿರುಗಿಸು) ಆಧಾರದ ಒಪ್ಪಂದಗಳಾಗಿವೆ. ಅಂದರೆ ಈ ರಸ್ತೆಯಲ್ಲಿ ಶುಲ್ಕದ ಪ್ರಮಾಣವನ್ನು ನಿರ್ಧರಿಸುವ ಮತ್ತು ಶುಲ್ಕ ಸಂಗ್ರಹಿಸುವ ಸಂಪೂರ್ಣ ಪರಮಾಧಿಕಾರ ಗುತ್ತಿಗೆ ಪಡೆದುಕೊಂಡ ಖಾಸಗಿ ಕಂಪೆನಿಗಳದ್ದಾಗಲಿವೆ.

ಇದರ ಪರಿಣಾಮವೇನಾಗಬಹುದು? 

ಇಂದು ದೇಶದ ಒಟ್ಟಾರೆ ಹೆದ್ದಾರಿಗಳಲ್ಲಿ 540ರಷ್ಟು ಟೋಲ್ ಸಂಗ್ರಹ ಕೇಂದ್ರಗಳಿವೆ. ಟೋಲ್ ಸಂಗ್ರಹದಲ್ಲಿ ಈಗಲೂ ಖಾಸಗಿ ಉಪ ಗುತ್ತಿಗೆದಾರರಿದ್ದರೂ ಟೋಲ್ ಪ್ರಮಾಣವನ್ನು ನಿಗದಿ ಮಾಡುವುದು ಮಾತ್ರ ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ. ಸರಕಾರದ ಅಂಕಿ-ಅಂಶದ ಪ್ರಕಾರವೇ 2019-20ರ ಸಾಲಿನಲ್ಲಿ ಅಂದಾಜು 30 ಸಾವಿರ ಕಿ.ಮೀ. ಉದ್ದದ ಹೆದ್ದಾರಿಯು ಸುಂಕ ಸಂಗ್ರಹಕ್ಕೆ ಒಳಪಟ್ಟಿತ್ತು ಮತ್ತು ಅದರಿಂದ ಸರಕಾರಕ್ಕೆ 26,861 ಕೋಟಿ ರೂ. ಗಳಷ್ಟು ಸುಂಕ ಸಂಗ್ರಹವಾಗುತ್ತಿತ್ತು. ಇದರಲ್ಲಿ ಸರಕಾರವೇ ನಿರ್ಮಿಸಿದ ರಸ್ತೆಯಾದರೆ ಒಂದು ಕಿ.ಮೀ.ಗೆ 1 ರೂಪಾಯಿ ಸುಂಕ ವಿಧಿಸುತ್ತಿದ್ದರೆ, ಖಾಸಗಿಯವರು ನಿರ್ಮಿಸಿದ ರಸ್ತೆಯಲ್ಲಿ ಒಂದು ಕಿ.ಮೀ.ಗೆ 1.29 ರೂ. ಸುಂಕ ಸಂಗ್ರಹಿಸಲಾಗುತ್ತಿತ್ತು. ಒಟ್ಟಾರೆಯಾಗಿ ಒಂದು ಕಿ.ಮೀ.ಗೆ ಒಂದು ರೂ. ಸುಂಕ ಎಂಬ ಸರಾಸರಿಯಿತ್ತು. ಅಂದರೆ ಹೆಚ್ಚೂ ಕಡಿಮೆ ಒಂದು ಕಿ.ಮೀ.ಗೆ ಸರಾಸರಿ ಒಂದು ಕೋಟಿ ರೂ. ಸುಂಕ ಸಂಗ್ರಹಿಸಲಾಗುತ್ತಿತ್ತು. ಆದರೆ ನೀತಿ ಆಯೋಗದ ನಗದೀಕರಣ ನೀಲನಕ್ಷೆಯ ಪ್ರಕಾರ ಒಂದು ವರ್ಷದಲ್ಲಿ ಒಂದು ಕಿ.ಮೀ. ಗೆ 3-4 ವರ್ಷಗಳ ಅವಧಿಯಲ್ಲಿ 6 ಕೋಟಿ ರೂ. ಆದಾಯ ನಿರೀಕ್ಷಿಸಲಾಗುತ್ತಿದೆ. ಅಂದರೆ ಈಗಿರುವ ಸುಂಕಕ್ಕಿಂತ ಎರಡು ಪಟ್ಟು ಆದಾಯ. ಆದರೆ ಸುಂಕ ಸಂಗ್ರಹದ ಗುತ್ತಿಗೆ ಪಡೆದುಕೊಂಡ ಕಂಪೆನಿಯು ಕಿ.ಮೀ.ಗೆ 6 ಕೋಟಿ ಶುಲ್ಕವನ್ನು ಸರಕಾರಕ್ಕೆ ಕಟ್ಟಿದ ನಂತರ ತನ್ನ ಆದಾಯವನ್ನು ಮಾಡಿಕೊಳ್ಳಬೇಕು. ಅಂದರೆ ಆ ಕಂಪೆನಿಯು ಸರಕಾರಕ್ಕೆ ಕೊಡಬೇಕಿರುವ ಪಾಲು, ತನ್ನ ಆಡಳಿತ ವೆಚ್ಚ, ರಸ್ತೆ ಸುಸ್ಥಿತಿ ಬಾಬತ್ತು ಇತ್ಯಾದಿ ವೆಚ್ಚಗಳನ್ನು ಭರಿಸಿದ ನಂತರವೇ ಲಾಭ ಕಾಣಲು ಸಾಧ್ಯ.

ಖಾಸಗಿ ಸುಂಕ ಕಂಪೆನಿಗಳಿಗೆ ಈ ಗುತ್ತಿಗೆಯಲ್ಲಿ ಲಾಭ ಮಾಡಿಕೊಳ್ಳಲು ಬೇರೆ ಯಾವುದೇ ಮಾರ್ಗವಿಲ್ಲವಾದ್ದರಿಂದ ಅವೆಲ್ಲವನ್ನೂ ಅದು ಬಳಕೆದಾರರ ಮೇಲೆ ವಿಧಿಸುವ ಸುಂಕದಿಂದಲೇ ಸಂಗ್ರಹಿಸಬೇಕು. ಹೀಗಾಗಿ ಈ ನಗದೀಕರಣ ಯೋಜನೆಯಡಿಯಲ್ಲಿ ಬರುವ ಹೆದ್ದಾರಿಗಳಲ್ಲಿ ಇನ್ನುಮುಂದೆ ಟೋಲ್ ದರ ಈಗಿರುವುದಕ್ಕಿಂತ ಕನಿಷ್ಠ ಎರಡರಿಂದ ಮೂರು ಪಟ್ಟು ಹೆಚ್ಚಾಗಲಿದೆ. ಅಷ್ಟು ಹೆಚ್ಚು ಮಾಡುವ ಅಧಿಕಾರವನ್ನು ಈ ಯೋಜನೆ ಖಾಸಗಿ ಕಂಪೆನಿಗಳಿಗೆ ನೀಡಿದೆ. ಸರಕಾರವೇ ನೇರವಾಗಿ ಸುಲಿಯದೆ ಖಾಸಗಿ ಕಂಪೆನಿಗಳ ಮೂಲಕ ಜನರನ್ನು ದುಪ್ಪಟ್ಟು ಸುಲಿಯುವ ಈ ಯೋಜನೆ ಸುಲಿಗೆಯ ಖಾಸಗೀಕರಣವೋ? ಅಥವಾ ಜನರ ಸುಲಿಗೆಯನ್ನೇ ಮೋದಿ ಸರಕಾರ ದೇಶದ ‘ಅಭಿವೃದ್ಧಿ’ ಎಂದು ಬಣ್ಣಿಸುತ್ತದೆಯೇ?

ರಾಷ್ಟ್ರ ನಿರ್ಮಾಣವೋ? ಅಂಬಾನಿ-ಅದಾನಿ ಸಂಸ್ಥಾನ ನಿರ್ಮಾಣವೋ?

ಹಾಗೆಯೇ ಗುತ್ತಿಗೆ ಕೊಡಲಾಗುತ್ತಿರುವ 42,3,00 ಕಿ.ಮೀ. ಉದ್ದದ ವಿದ್ಯುತ್ ಲೈನ್ ಮತ್ತು ಕಂಬಗಳನ್ನು ಸರಕಾರ ನಿರ್ಮಿಸಿ ಆಗಿದೆ. ಅದಕ್ಕೆ ತಗಲಿರುವ ವೆಚ್ಚವನ್ನು ಈಗಾಗಲೇ ವಿದ್ಯುತ್ ಶುಲ್ಕದ ಮೂಲಕ ನಾಗರಿಕರು ತೆರುತ್ತಿದ್ದಾರೆ. ಈಗ ಅದರ ನಿರ್ವಹಣೆಯ ಗುತ್ತಿಗೆ ಪಡೆದುಕೊಳ್ಳುವ ಕಂಪೆನಿ ತನಗಾಗುವ ವೆಚ್ಚವನ್ನು ಮತ್ತು ತನಗೆ ಬರಬೇಕಿರುವ ಲಾಭವನ್ನು ವಿದ್ಯುತ್ ಶುಲ್ಕವನ್ನು ಹೆಚ್ಚಿಸುವ ಮೂಲಕ ತಾನೇ ಭರಿಸಲು ಸಾಧ್ಯ? ಖಾಸಗಿ ಕಾರ್ಪೊರೇಟ್ ವಿದ್ಯುತ್ ನಿರ್ವಹಣಾ ಕಂಪೆನಿಗಳ ಲಾಭವನ್ನು ಹೆಚ್ಚಿಸಲು ನಮ್ಮ ಮನೆಗಳ ಬೆಳಕನ್ನು ನಂದಿಸುವುದು ಯಾರ ‘ಅಭಿವೃದ್ಧಿ’ ಯೋಜನೆ?
 
150 ಖಾಸಗಿ ಟ್ರೈನುಗಳು ಮತ್ತು 400 ಸ್ಟೇಷನ್‌ಗಳ ಹಾಗೂ ಟ್ರಾಕುಗಳ ನಿರ್ವಹಣಾ ಯೋಜನೆಯ ನಗದೀಕರಣವಾಗುವುದು ಪ್ಲಾಟ್ ಫಾರಂ ಶುಲ್ಕ ಮತ್ತು ಸ್ಟೇಷನ್‌ನಲ್ಲಿ ಈಗಾಗಲೇ ಲಭ್ಯವಿರುವ ಸೌಕರ್ಯಗಳ ಮೇಲಿನ ಶುಲ್ಕ ಹೆಚ್ಚಳ, ಸ್ಟೇಷನ್‌ನಲ್ಲಿರುವ ಅಂಗಡಿಗಳ ಬಾಡಿಗೆ ಹೆಚ್ಚಳ ಇತ್ಯಾದಿಗಳ ಮೂಲಕವೇ ಎಂದು ಆ ನೀತಿ ಅಯೋಗ ಮುಚ್ಚುಮರೆಯಿಲ್ಲದೆ ಹೇಳಿದೆ. ಆದರೆ, ಅಷ್ಟು ಮಾತ್ರವಲ್ಲ ಖಾಸಗಿಯವರು ತಾವು ಓಡಿಸುವ ಟ್ರೈನುಗಳಲ್ಲಿ ನಿಗದಿಯಾದಷ್ಟು ಪ್ರಮಾಣದ ಪ್ರಯಾಣ ಸಂದಣಿ ಹಾಗೂ ತಾವು ನಿರ್ವಹಣೆ ಮಾಡುವ ಟ್ರಾಕುಗಳಲ್ಲಿ ಟ್ರೈನು ಸಂದಣಿಯನ್ನು ಸರಕಾರ ಖಾತರಿ ಮಾಡಬೇಕಾದ ಒಪ್ಪಂದಗಳು ಈ ಯೋಜನೆಯ ಅಂತರ್ಗತ ಭಾಗವಾಗಿದೆ!
 
ಆಗ ಖಾಸಗಿ ನಿರ್ವಹಣಾ ಕಂಪೆನಿಗೆ ಲಾಭವಾಗುವಷ್ಟು ಪ್ರಯಾಣ ದರ ಹೆಚ್ಚಿಸಬೇಕು ಹಾಗೂ ಲಾಭಕ್ಕೆ ಪೈಪೋಟಿಯಾಗ ಬಲ್ಲ ಅಗ್ಗದ ರೂಟು ಮತ್ತು ಟ್ರೈನುಗಳನ್ನು ರದ್ದು ಮಾಡಬೇಕು. ಆಗ ರೈಲ್ವೆಯ ಉದ್ದೇಶ ಪ್ರಯಾಣಿಕರ ಹಾಗೂ ದೇಶದ ಆರ್ಥಿಕ ಅಗತ್ಯಗಳನ್ನು ಪೂರೈಸುವುದಕ್ಕಿಂತ ಗುತ್ತಿಗೆ ಪಡೆದ ಖಾಸಗಿಯವರ ಲಾಭವನ್ನು ಖಾತರಿ ಗೊಳಿಸುವುದೇ ಆಗುವುದಿಲ್ಲವೇ? ಇದನ್ನು ದೇಶ ನಿರ್ಮಾಣ ಎನ್ನಬಹುದೇ?

ಇನ್ನು ಟೆಲಿಕಾಂ ನಗದೀಕರಣ ಯೋಜನೆಯಂತೂ ದಾರುಣ ದೇಶದ್ರೋಹ. ಈಗಾಗಲೇ ಅಂಬಾನಿಯ ರಿಲಯನ್ಸ್ ಕಂಪೆನಿಗೆ ಪೈಪೋಟಿಯಾಗದಂತೆ ಭಾರತ ಸರಕಾರ ತನ್ನದೇ ಬಿಎಸ್‌ಎನ್‌ಎಲ್ ಅನ್ನು ಕತ್ತು ಹಿಸುಕಿ ಕೊಲ್ಲುತ್ತಿ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News