ಸಾರ್ವಜನಿಕ ರಂಗದ ಸಂಸ್ಥೆಗಳು ದೇಶದ ಜನರ ಆಸ್ತಿ: ಕೇಂದ್ರದ ಮಾನಿಟೈಸೇಶನ್ ಪೈಪ್‍ಲೈನ್ ಯೋಜನೆಗೆ ಸ್ಟಾಲಿನ್ ವಿರೋಧ

Update: 2021-09-02 14:35 GMT

ಚೆನ್ನೈ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ನ್ಯಾಷನಲ್ ಮಾನಿಟೈಸೇಶನ್ ಪೈಪ್‍ಲೈನ್ ಸ್ಕೀಮ್ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಈ ಯೋಜನೆಗೆ ತಮ್ಮ ರಾಜ್ಯದ ವಿರೋಧವನ್ನು ಕೇಂದ್ರಕ್ಕೆ ಸೂಚಿಸಲಿದ್ದಾರೆ.

"ಸಾರ್ವಜನಿಕ ರಂಗದ ಸಂಸ್ಥೆಗಳು ಈ ದೇಶದ ಜನರ ಆಸ್ತಿಯಾಗಿದೆ. ಅವುಗಳ ಖಾಸಗೀಕರಣ ಈ ದೇಶದ ಜನರು ಹಾಗೂ ದೇಶದ ಕಲ್ಯಾಣಕ್ಕೆ ಸೂಕ್ತವಲ್ಲ. ಪ್ರಧಾನಿಗೆ ಈ ಕುರಿತು ಪ್ರತ ಬರೆಯುತ್ತೇನೆ" ಎಂದು  ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಸ್ಟಾಲಿನ್ ಹೇಳಿದರು.

ಕಾಂಗ್ರೆಸ್ ಹಾಗೂ ಸಿಪಿಐನ ಇಬ್ಬರು ಸದಸ್ಯರು ಎತ್ತಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು "ಇಂತಹ ವಿಚಾರಗಳಲ್ಲಿ ಕೇಂದ್ರ ಸರಕಾರವು ರಾಜ್ಯಗಳನ್ನು  ವಿಶ್ವಾಸಕ್ಕೆ ಪಡೆಯಬೇಕು. ಇಂತಹ ಸಾರ್ವಜನಿಕ ಆಸ್ತಿಗಳ ನಿರ್ಮಾಣಕ್ಕಾಗಿ ರಾಜ್ಯಗಳು ಜಮೀನು ಒದಗಿಸಿವೆ" ಎಂದು  ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News