ಕೇರಳ: ನಿಫಾ ವೈರಸ್ ಸೋಂಕಿಗೆ ಬಾಲಕ ಮೃತ್ಯು

Update: 2021-09-05 05:27 GMT
ಸಾಂದರ್ಭಿಕ ಚಿತ್ರ, PTI

ಕೋಯಿಕ್ಕೋಡ್: ನಿಫಾ ವೈರಸ್ ಸೋಂಕಿನಿಂದಾಗಿ ಕೇರಳದ ಆಸ್ಪತ್ರೆಯಲ್ಲಿ 12 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ರವಿವಾರ ಹೇಳಿದ್ದಾರೆ.

ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ ಈ ಹುಡುಗನ ಮಾದರಿಗಳು ನಿಫಾ ವೈರಸ್ ಇರುವುದನ್ನು ದೃಢಪಡಿಸಿದೆ.

ಕೇಂದ್ರ ಸರಕಾರವು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ತಂಡವನ್ನು ರಾಜ್ಯಕ್ಕೆ ರವಾನಿಸಿದೆ.  ತಂಡವು ರವಿವಾರ ತಲುಪಲಿದೆ. ಈ ತಂಡವು ರಾಜ್ಯಕ್ಕೆ ತಾಂತ್ರಿಕ ಬೆಂಬಲವನ್ನು ನೀಡುತ್ತದೆ.

ಸುದ್ದಿಗಾರರಿಗೆ ಪ್ರಕರಣದ ವಿವರ ನೀಡಿದ ಸಚಿವರು "ದುರದೃಷ್ಟವಶಾತ್ ಬಾಲಕ  ಬೆಳಿಗ್ಗೆ 5 ಗಂಟೆಗೆ ನಿಧನರಾದರು. ಶನಿವಾರ ರಾತ್ರಿ ಬಾಲಕನ ಸ್ಥಿತಿ ಗಂಭೀರವಾಗಿತ್ತು. ನಾವು ವಿವಿಧ ತಂಡಗಳನ್ನು ರಚಿಸಿದ್ದೇವೆ ಹಾಗೂ  ಪತ್ತೆಹಚ್ಚುವಿಕೆಯನ್ನು ಆರಂಭಿಸಿದ್ದೇವೆ. ಹುಡುಗನ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪ್ರತ್ಯೇಕಿಸುವ ಕುರಿತು ಹೆಜ್ಜೆಗಳನ್ನು ಇಟ್ಟಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News