ಮರ್ಸಿಡಿಸ್ ಬೆಂಝ್ ಡೀಲರ್ ಆಗಿ 2 ದಶಕ ಪೂರ್ಣಗೊಳಿಸಿದ ಸುಂದರಂ ಮೋಟರ್ಸ್

Update: 2021-09-08 15:20 GMT

ಬೆಂಗಳೂರು, ಸೆ.8: ಪ್ರತಿಷ್ಠಿತ ಮರ್ಸಿಡಿಸ್ ಬೆಂಝ್ ಕಾರುಗಳ ಡೀಲರ್ ಆಗಿ ಟಿವಿಎಸ್ ಸುಂದರಂ ಮೋಟರ್ಸ್ ಯಶಸ್ವಿ 2 ದಶಕ ಪೂರ್ಣಗೊಳಿಸಿದೆ. ಈ ಖುಷಿಯಲ್ಲಿ ರಾಜಧಾನಿ ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿರುವ ಟಿವಿಎಸ್ ಸುಂದರಂ ಮೋಟರ್ಸ್ ನಲ್ಲಿ ಬುಧವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಭ್ರಮಾಚರಣೆ ಅಂಗವಾಗಿ ನೂತನ 20 ಮರ್ಸಿಡಿಸ್ ಬೆಂಝ್ ವಿಲಾಸಿ ಕಾರುಗಳನ್ನು ಮಾಲಕರಿಗೆ ಹಸಿರು ನಿಶಾನೆ ತೋರುವ ಮೂಲಕ ಹಸ್ತಾಂತರಿಸಲಾಯಿತು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಮರ್ಸಿಡಿಸ್ ಬೆಂಝ್ ಇಂಡಿಯಾದ ಆಡಳಿತ ನಿರ್ದೇಶಕ ಹಾಗು ಸಿಇಒ ಮಾರ್ಟಿನ್ ಶ್ವೇನ್ಕ್ ಅವರು ಸುಂದರಂ ಮೋಟರ್ಸ್ ಜೊತೆಗಿನ ಎರಡು ದಶಕಗಳ ಯಶಸ್ವಿ ಸಹಭಾಗಿತ್ವದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮರ್ಸಿಡಿಸ್ ಬೆಂಝ್ ನ ಮೂಲವಾದ ಗ್ರಾಹಕ ಕೇಂದ್ರಿತ ಸೇವೆಯ ಮೂಲಕ ಸುಂದರಂ ಮೋಟರ್ಸ್ ಗ್ರಾಹಕರ ಮನ ಗೆದ್ದಿದೆ ಎಂದವರು ಹೇಳಿದರು.

ಭವಿಷ್ಯದಲ್ಲಿ ಎಲೆಕ್ಟ್ರಾನಿಕ್ ಕಾರುಗಳದ್ದೆ ಪಾರಮ್ಯ ಇರಲಿದ್ದು ಈ ನಿಟ್ಟಿನಲ್ಲಿ ಬೆಂಝ್ ಕಂಪೆನಿಯು ಆಲೋಚನೆ ನಡೆಸಿದೆ​ ಎಂದು ​ಮಾರ್ಟಿನ್ ಶ್ವೇನ್ಕ್ ಹೇಳಿದರು. ಮುಂಬರುವ ಹಬ್ಬಗಳ ಸಂಭ್ರಮಾಚರಣೆಗೆ ಮರ್ಸಿಡಿಸ್ ಬೆಂಝ್ ನಿಂದ ಡ್ರೀಮ್ ಫೆಸ್ಟ್ ಎಂಬ ಹೊಸ ಕೊಡುಗೆ ನೀಡಲಿದೆ. ಇದರಲ್ಲಿ ಬೆಂಝ್ ಖರೀದಿಸಬಯಸುವ ಗ್ರಾಹಕರಿಗೆ ಅತ್ಯಾಕರ್ಷಕ ಸಾಲ  ಸೌಲಭ್ಯಗಳನ್ನು ನೀಡಲಾಗುತ್ತದೆ.  ಅದೃಷ್ಟ ಶಾಲಿ ವಿಜೇತರಿಗೆ ಅಬುಧಾಬಿಗೆ ಉಚಿತ ಪ್ರವಾಸ ಹಾಗು ಫಾರ್ಮುಲಾ ರೇಸ್ ಚಾಂಪಿಯನ್ ಲೀವಿಸ್ ಹ್ಯಾಮಿಲ್ಟನ್ ಅವರನ್ನು ಭೇಟಿಯಾಗುವ ಸುವರ್ಣಾವಕಾಶ ಸಿಗಲಿದೆ ಎಂದು ಮಾರ್ಟಿನ್  ಹೇಳಿದರು.

ಟಿವಿಎಸ್ ಸುಂದರಂ ಮೋಟರ್ಸ್ ಕಂಪೆನಿಯ ಕಾರ್ಯಕಾರಿ ನಿರ್ದೇಶಕ ಶರತ್ ವಿಜಯ್ ರಾಘವನ್ ಮಾತನಾಡಿ ಎರಡು ದಶಕಗಳಲ್ಲಿ  ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 6 ನಗರಗಳಲ್ಲಿ 11 ಬೃಹತ್ ಶೋರೂಮ್ ಗಳ ಮೂಲಕ ಹತ್ತು ಸಾವಿರಕ್ಕೂ ಹೆಚ್ಚು ಮರ್ಸಿಡಿಸ್ ಬೆಂಝ್ ಕಾರುಗಳ ಮಾರಾಟ ಮಾಡಿದ್ದೇವೆ. ಗ್ರಾಹಕರೇ ನಮ್ಮ ಎಲ್ಲ ಚಟುವಟಿಕೆಗಳ ಕೇಂದ್ರಬಿಂದು ಎಂದು ನಂಬಿಕೊಂಡು ನಡೆಸಿಕೊಂಡು ಬಂದಿದ್ದೇವೆ. ಸದ್ಯ ನಮ್ಮಲ್ಲಿ 800 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಮಾರಾಟ, ಕೌಶಲತೆಯನ್ನು ಪರಿಗಣಿಸಿ  250ಕ್ಕೂ ಹೆಚ್ಚಿನ ಪ್ರಶಸ್ತಿಗಳು ಬಂದಿವೆ. ಈಗ 2 ದಶಕಗಳ ಸಂಭ್ರಮವನ್ನು ಹಂಚಿಕೊಳ್ಳಲು 'ಸುಂದರಂ ಸಿಗ್ನೇಚರ್ ಸರ್ವಿಸಸ್' ಎಂಬ ಯೋಜನೆಯ ಮೂಲಕ ಗ್ರಾಹಕರಿಗೆ ವಿಶೇಷ  ಸೇವೆಗಳನ್ನು ನೀಡಲಿದೆ ಎಂದು ಹೇಳಿದರು.

ಮರ್ಸಿಡಿಸ್ ಬೆಂಝ್ ಸ್ಟೂಡಿಯೋ

ಮರ್ಸಿಡಿಜ್ ಬೆಂಝ್ ಸ್ಟೂಡಿಯೋ ಎಂಬ ಹೊಸ ವಿಭಾಗ ತೆರೆದಿದ್ದು, ಇಲ್ಲಿ ಕಾರ್ ಕೇರ್ ಉತ್ಪನ್ನಗಳು ದೊರೆಯಲಿವೆ. ಅಲ್ಲದೆ, ತಮ್ಮ ಕಾರನ್ನು ಮಾಲಕರಿಗೆ ಇಷ್ಟವಾದ ಬಣ್ಣ, ಇತರೆ ಉತ್ಪನ್ನಗಳನ್ನು ಬದಲು ಮಾಡಿಕೊಳ್ಳಲು ಅವಕಾಶ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News