ಪಾಕಿಸ್ತಾನ: ಲೆ.ಜ. ಅಝರ್ ಅಬ್ಬಾಸ್ ಸೇನಾ ಸಿಬಂದಿ ಮುಖ್ಯಸ್ಥರಾಗಿ ನೇಮಕ

Update: 2021-09-08 17:14 GMT

 ಇಸ್ಲಮಾಬಾದ್, ಸೆ.8: ಪಾಕ್ ಸೇನಾ ಪಡೆಯಲ್ಲಿ ಮಹತ್ವದ ಪುನರ್ರಚನೆ ನಡೆಸಲಾಗಿದ್ದು ಭಾರತದೊಂದಿಗಿನ ಗಡಿನಿಯಂತ್ರಣಾ ರೇಖೆಯಲ್ಲಿ ಭದ್ರತೆಯ ಉಸ್ತುವಾರಿಯಾಗಿದ್ದ ಲೆ.ಜ. ಅಝರ್ ಅಬ್ಬಾಸ್ ರನ್ನು ಸೇನಾ ಸಿಬಂದಿ ಮುಖ್ಯಸ್ಥ(ಸಿಜಿಎಸ್)ರನ್ನಾಗಿ ನೇಮಿಸಲಾಗಿದೆ. ಸೇನಾಪಡೆಯ ಮುಖ್ಯಸ್ಥರ ಬಳಿಕದ ಉನ್ನತ ಹುದ್ದೆ ಇದಾಗಿದೆ.

ಇದುವರೆಗೆ ಈ ಹುದ್ದೆಯಲ್ಲಿದ್ದ ಲೆ.ಜ. ಸಾಹಿರ್ ಶಮ್ಸದ್ ಮಿರ್ಝಾರನ್ನು ರಾವಲ್ಪಿಂಡಿಯ 10 ಕಾರ್ಪ್ಸ್ ಪಡೆಯ ಕಮಾಂಡರ್ ಹುದ್ದೆಗೆ ವರ್ಗಾಯಿಸಲಾಗಿದೆ ಎಂದು ಪಾಕ್ ಸೇನೆಯ ಮಾಧ್ಯಮ ವಿಭಾಗ ಐಎಸ್ಪಿಆರ್ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ರಾವಲ್ಪಿಂಡಿ ಕಾರ್ಪ್ಸ್ ಗಡಿ ನಿಯಂತ್ರಣಾ ರೇಖೆಯಲ್ಲಿನ ಭದ್ರತಾ ಸ್ಥಿತಿಯ ಜವಾಬ್ದಾರಿ ನಿರ್ವಹಿಸುತ್ತದೆ.

ಸೇನಾ ಮುಖ್ಯಸ್ಥರ ಬಳಿಕದ ಉನ್ನತ ಹುದ್ದೆಯಾಗಿರುವ ಸಿಜಿಸಿಗೆ ಕಾರ್ಯಾಚರಣೆ ಮತ್ತು ಗುಪ್ತಚರ ವಿಷಯಗಳನ್ನು ನಿಯೋಜಿಸಲಾಗಿದೆ. ಮಿಲಿಟರಿ ಕಾರ್ಯಾಚರಣೆಗಳ ನಿರ್ದೇಶನಾಲಯಗಳು ಮತ್ತು ಮಿಲಿಟರಿ ಗುಪ್ತಚರ ವಿಭಾಗ ಇವರ ಅಧಿಕಾರ ವ್ಯಾಪ್ತಿಗೆ ಸೇರುತ್ತದೆ ಎಂದು ‘ದಿ ಡಾನ್ ನ್ಯೂಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News