ಅಮೆರಿಕ: 12 ವರ್ಷದೊಳಗಿನ ಮಕ್ಕಳ ಕೋವಿಡ್ ಲಸಿಕೆ ಅಕ್ಟೋಬರ್ ಅಂತ್ಯಕ್ಕೆ ಲಭ್ಯ?

Update: 2021-09-13 17:39 GMT

ನ್ಯೂಯಾರ್ಕ್, ಸೆ.13: ಅಮೆರಿಕದಲ್ಲಿ ಡೆಲ್ಟಾ ರೂಪಾಂತರ ಪ್ರಕರಣ ಹೆಚ್ಚುತ್ತಿರುವ ಮಧ್ಯೆಯೇ, ಅಕ್ಟೋಬರ್ ಅಂತ್ಯದ ವೇಳೆಗೆ 12 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಅಕ್ಟೋಬರ್ ಅಂತ್ಯದೊಳಗೆ 5ರಿಂದ 11 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಲಭ್ಯವಾಗಲಿದೆ ಎಂದು ಆಹಾರ ಮತ್ತು ಔಷಧ ಸಮಿತಿಯ ಮಾಜಿ ಆಯುಕ್ತ ಡಾ. ಸ್ಕಾಟ್ ಗಾಟ್ಲೀಬ್ ಹಾಗೂ ಟೆಕ್ಸಾಸ್ ನ ಮಕ್ಕಳ ಆಸ್ಪತ್ರೆಯ ಶಿಶುರೋಗ ತಜ್ಞ ಡಾ. ಜೇಮ್ಸ್ ವೆಸಾಲೊವಿಕ್ ಹೇಳಿರುವುದಾಗಿ ಪತ್ರಿಕೆಯ ವರದಿ ತಿಳಿಸಿದೆ. ಪೈಝರ್ ಸಂಸ್ಥೆ ಮಕ್ಕಳಿಗಾಗಿ ಅಭಿವ್ಥದ್ಧಿಪಡಿಸಿದ ಲಸಿಕೆ ಅಕ್ಟೋಬರ್ ಅಂತ್ಯದೊಳಗೆ ಲಭಿಸುವ ವಿಶ್ವಾಸವಿದೆ ಎಂದು ಡಾ. ಗಾಟ್ಲೀಬ್ ಹೇಳಿದ್ದಾರೆ. ಈ ಅಭಿಪ್ರಾಯಕ್ಕೆ ವೆಸಾಲೊವಿಕ್ ಧ್ವನಿಗೂಡಿಸಿದ್ದಾರೆ ಎಂದು ವರದಿ ಹೇಳಿದೆ.

ಡೆಲ್ಟಾ ವೈರಸ್ ಸೋಂಕಿತ ಮಕ್ಕಳ ಪ್ರಮಾಣ ಹೆಚ್ಚುತ್ತಿರುವುದ ಕಳವಳಕಾರಿಯಾಗಿದೆ. ವಯಸ್ಕರಿಗೆ ಹೋಲಿಸಿದರೆ, ಸೋಂಕು ದೃಢಪಟ್ಟ ಮಕ್ಕಳಲ್ಲಿ ಸೋಂಕಿನ ಅಲ್ಪಲಕ್ಷಣ ಇರಬಹುದು ಅಥವಾ ಲಕ್ಷಣವೇ ಕಾಣಿಸಿಕೊಳ್ಳದಿರಬಹುದು. ಮಕ್ಕಳ ಮೇಲೆ ಲಸಿಕೆಯ ಪರಿಣಾಮಕಾರಿತ್ವ ಮತ್ತು ಎಷ್ಟು ಪ್ರಮಾಣದ ಡೋಸ್ ನ ಅಗತ್ಯವಿದೆ ಎಂಬ ಬಗ್ಗೆ ಪೈಝರ್ ಮತ್ತು ಮೊಡೆರ್ನಾ ಸಂಸ್ಥೆಯ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ ಎಂದು ವೆಸಾಲೊವಿಕ್ ಹೇಳಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News