ಗುಜರಾತ್‌ ನ ಅದಾನಿ ಬಂದರಿನಿಂದ 21,000 ಕೋಟಿ ಮೌಲ್ಯದ ಅಫ್ಘಾನ್ ಹೆರಾಯಿನ್‌ ವಶ !

Update: 2021-09-21 09:53 GMT
ಸಾಂದರ್ಭಿಕ ಚಿತ್ರ (Photo source: PTI)

ಅಹ್ಮದಾಬಾದ್, ಸೆ.21: ಅಫ್ಘಾನಿಸ್ತಾನದಿಂದ ಸಾಗಿಸಲಾಗುತ್ತಿದ್ದ 21,000 ಕೋಟಿ ರೂಪಾಯಿ ಮೌಲ್ಯದ ಮೂರು ಟನ್ ಹೆರಾಯಿನ್ ಅನ್ನು ಗುಜರಾತ್ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ.

ಎರಡು ಕಂಟೈನರ್‌ಗಳಲ್ಲಿ ಟಾಲ್ಕ್ ಹೆಸರಿನಲ್ಲಿ ಹೆರಾಯಿನ್ ಸಾಗಿಸಲಾಗುತ್ತಿತ್ತು ಇದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಮುಂಡ್ರಾ ಬಂದರಿನಲ್ಲಿ ಪತ್ತೆ ಮಾಡಿ, ಇಬ್ಬರನ್ನು ಮಾಲು ಸಹಿತ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಒಂದು ಕಂಟೈನರ್‌ನಲ್ಲಿ 2 ಸಾವಿರ ಕೆಜಿ ಹಾಗೂ ಇನ್ನೊಂದು ಕಂಟೈನರ್‌ನಲ್ಲಿ ಒಂದು ಸಾವಿರ ಕೆಜಿ ಹೆರಾಯಿನ್ ಇತ್ತು. ಮೂಲತಃ ಅಫ್ಘಾನಿಸ್ತಾನದ ಈ ಡ್ರಗ್ಸ್ ಅನ್ನು ಇರಾನ್ ಬಂದರಿನಿಂದ ಗುಜರಾತ್‌ಗೆ ಹಡಗಿನಲ್ಲಿ ಕಳುಹಿಸಲಾಗಿತ್ತು ಎಂದು ನಿರ್ದೇಶನಾಲಯ ಸ್ಪಷ್ಟಪಡಿಸಿದೆ.

ಅಹ್ಮದಾಬಾದ್, ದಿಲ್ಲಿ, ಚೆನ್ನೈ, ಗಾಂಧಿಧಾಮ ಮತ್ತು ಗುಜರಾತ್‌ನ ಮಾಂಡ್ವಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದೆ. ಈ ಮಾಲಿನ ಒಟ್ಟು ಮೌಲ್ಯ 21,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ದಂಧೆಯಲ್ಲಿ ಅಫ್ಘಾನ್ ಪ್ರಜೆಗಳ ಕೈವಾಡ ಇರುವುದು ಪತ್ತೆಯಾಗಿದೆ. ಆದರೆ ಈ ಸಂಬಂಧ ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಡಿಆರ್‌ಐ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News