ಉಧಂಪುರ: ಹೆಲಿಕಾಪ್ಟರ್ ಪತನ, ಇಬ್ಬರು ಸೇನಾ ಪೈಲಟ್‌ಗಳು ಮೃತ್ಯು

Update: 2021-09-21 09:56 GMT
Credit: PTI Photo

ಶ್ರೀನಗರ: ಜಮ್ಮು-ಕಾಶ್ಮೀರದ ಉಧಂಪುರ್ ಜಿಲ್ಲೆಯ ಪಟ್ನಿಟಾಪ್ ಬಳಿಯ ಬೆಟ್ಟಗಳ ಮೇಲೆ ಸೇನಾ ಹೆಲಿಕಾಪ್ಟರ್ ವೊಂದು ಮಂಗಳವಾರ  ಬೆಳಗ್ಗೆ 10:30ರ ಸುಮಾರಿಗೆ ಪತನಗೊಂಡಿದ್ದು, ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ ಎಂದು NDTV ವರದಿ ಮಾಡಿದೆ.

ಸೇನಾ ಏವಿಯೇಷನ್ ಹೆಲಿಕಾಪ್ಟರ್ ನ ಪೈಲಟ್ ಗಳು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯರು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಪೈಲಟ್ ಗಳು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಇಬ್ಬರೂ ಪೈಲಟ್‌ಗಳು ಮೇಜರ್ ರ್ಯಾಂಕಿನ  ಅಧಿಕಾರಿಗಳಾಗಿದ್ದರು ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ನಾವು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಆದರೆ ದುರದೃಷ್ಟವಶಾತ್ ಇಬ್ಬರೂ ಪ್ರಾಣ ಕಳೆದುಕೊಂಡರು" ಎಂದು ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News