ಆಸ್ಟ್ರೇಲಿಯಾದಲ್ಲಿ ಭೂಕಂಪ: ಗಾಬರಿಯಿಂದ ಮನೆಯಿಂದ ಹೊರಬಂದ ಜನತೆ

Update: 2021-09-22 05:27 GMT
ಸಾಂದರ್ಭಿಕ ಚಿತ್ರ

ಸಿಡ್ನಿ/ಮೆಲ್ಬೋರ್ನ್: ಆಗ್ನೇಯ ಆಸ್ಟ್ರೇಲಿಯಾದಲ್ಲಿ ಬುಧವಾರ ಮುಂಜಾನೆ ಅಪರೂಪದ ಭೂಕಂಪ ಸಂಭವಿಸಿದ್ದು, ಭೂಕಂಪದಿಂದಾಗಿ ಕಟ್ಟಡಗಳು ಅಲುಗಾಡಿದ್ದು, ಗೋಡೆಗಳು ಉರುಳಿ ಬಿದ್ದವು ಹಾಗೂ ಗಾಬರಿಗೊಂಡ ನಿವಾಸಿಗಳು ಮೆಲ್ಬೋರ್ನ್‌ನ ರಸ್ತೆಗಳತ್ತ ಓಡಿದರು ಎಂದು ವರದಿಯಾಗಿದೆ.

ಆಳವಿಲ್ಲದ ಭೂಕಂಪವು ದೇಶದ ಎರಡನೇ ಅತ್ಯಂತ ದೊಡ್ಡ ನಗರ ಮೆಲ್ಬೋರ್ನ್  ಪೂರ್ವಕ್ಕೆ ಸ್ಥಳೀಯ ಸಮಯ 9:00 ಗಂಟೆಯ ನಂತರ (2300 GMT) ಅಪ್ಪಳಿಸಿತು .

ಅಮೆರಿಕದ  ಜಿಯಾಲಾಜಿಕಲ್ ಸರ್ವೇ ಕಂಪನಿಯು ಭೂಕಂಪದ ಪ್ರಮಾಣವನ್ನು 5.8 ರಷ್ಟಿತ್ತು  ಎಂದಿದೆ. ನಂತರ ಅದನ್ನು 5.9 ಕ್ಕೆ ಪರಿಷ್ಕರಿಸಲಾಯಿತು. ಭೂಕಂಪನವು 10 ಕಿಲೋಮೀಟರ್ (ಆರು ಮೈಲಿ) ಆಳದಲ್ಲಿ ಅಪ್ಪಳಿಸಿತು ಎಂದು ಜಿಯಾಲಾಜಿಕಲ್ ಸರ್ವೇ ತಿಳಿಸಿದೆ.

ಮೆಲ್ಬೋರ್ನ್ ನ ಚಾಪೆಲ್ ಸ್ಟ್ರೀಟ್ ಸುತ್ತಮುತ್ತಲಿನ ಜನಪ್ರಿಯ ಶಾಪಿಂಗ್ ಪ್ರದೇಶದಲ್ಲಿ ಕಸಕಡ್ಡಿಗಳು ಬಿದ್ದಿದ್ದು, ಕಟ್ಟಡಗಳಿಂದ ಇಟ್ಟಿಗೆಗಳು ಸಡಿಲವಾಗಿ ಹೊರ ಬರುತ್ತಿವೆ.

ಭೂಮಿ ನಡುಗಿದಾಗ  ತಾನು ರಸ್ತೆಗೆ ಧಾವಿಸಿದೆ. ಇಡೀ ಕಟ್ಟಡವು ಅಲುಗಾಡುತ್ತಿತ್ತು. ಎಲ್ಲಾ ಕಿಟಕಿಗಳು, ಗಾಜು ಅಲುಗಾಡುತ್ತಿದ್ದವು  ಎಂದು ಮೆಲ್ಬೋರ್ನ್‌ನ ಓಪನ್ ಕೆಫೆಯ ಮಾಲೀಕ ಝೂಮ್ ಫಿಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News