ಶ್ರೀ ಪ್ರಭುಚನ್ನ ಸ್ವಾಮೀಜಿ ರಚಿಸಿದ 'ಮಹಾತ್ಮರ ಚರಿತಾಮೃತ' ಗ್ರಂಥ ಬಿಡುಗಡೆ

Update: 2021-09-25 07:07 GMT

ಬೆಂಗಳೂರು, ಸೆ.25: ಅಥಣಿ ಮೊಟಗಿಮಠದ ಪೀಠಾಧಿಪತಿ ಶ್ರೀ ಪ್ರಭುಚನ್ನ ಸ್ವಾಮೀಜಿ ರಚಿಸಿರುವ 'ಮಹಾತ್ಮರ ಚರಿತಾಮೃತ' ಗ್ರಂಥವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಲೋಕಾರ್ಪಣೆ ಮಾಡಿದರು.

ಸುತ್ತೂರು ಸಂಸ್ಥಾನದ ಜಗದ್ಗುರು ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿ, ಸಚಿವ ವಿ.ಸೋಮಣ್ಣ, ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ  ನ್ಯಾಯಮೂರ್ತಿ ಶಿವರಾಜ್  ವಿ. ಪಾಟೀಲ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಸವ ವೇದಿಕೆ ಅಧ್ಯಕ್ಷ ಡಾ:ಸಿ.ಸೋಮಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News