ಸದನವನ್ನು ಬಿಜೆಪಿ ಮದುವೆ ಛತ್ರದಂತೆ ಭಾವಿಸಿದೆ: ಕಾಂಗ್ರೆಸ್ ಟೀಕೆ

Update: 2021-09-25 07:47 GMT
ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಶುಕ್ರವಾರ ಭಾಷಣ ಮಾಡಿದರು. 

ಬೆಂಗಳೂರು, ಸೆ.25: ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಭಾಷಣ ಮಾಡಿದ್ದನ್ನು ಆಕ್ಷೇಪಿಸಿರುವ ಕಾಂಗ್ರೆಸ್ ಪಕ್ಷ, 'ಸದನವನ್ನು ಬಿಜೆಪಿ ಮದುವೆ ಛತ್ರದಂತೆ ಭಾವಿಸಿದೆ' ಎಂದು ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಹೀಗೆಯೇ ಬಿಟ್ಟರೆ ಸದನದಲ್ಲಿ ಮದುವೆ, ಮುಂಜಿಯಂತಹ ಸಮಾರಂಭಗಳನ್ನು ಮಾಡಲೂ ಬಿಜೆಪಿ ಹಿಂಜರಿಯುವುದಿಲ್ಲ' ಎಂದು ಕಿಡಿಕಾರಿದೆ.

"ಗೌರವಾನ್ವಿತ ಸದನವನ್ನು ಮದುವೆ ಛತ್ರದಂತೆ ಭಾವಿಸಿದೆ! ನಿಯಮಗಳನ್ನ ಸದನ ಸದಸ್ಯರಲ್ಲದವರನ್ನ ಕರೆಸಿ ಭಾಷಣ ಮಾಡಿಸಿ ಯಾವ ಘನ ಕಾರ್ಯ ಸಾಧಿಸಿದೆ ಬಿಜೆಪಿ? ಹೀಗೆಯೇ ಬಿಟ್ಟರೆ ಸದನದಲ್ಲಿ ಮದುವೆ, ಮುಂಜಿಯಂತಹ ಸಮಾರಂಭಗಳನ್ನ ಮಾಡಲೂ ಬಿಜೆಪಿ ಹಿಂಜರಿಯುವುದಿಲ್ಲ! ಪ್ರಜಾಪ್ರಭುತ್ವದ ಘನತೆ ಅರಿಯದವರಿಂದ ಇನ್ನೇನು ನಿರೀಕ್ಷಿಸಲಾದೀತು?" ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News