ಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕಮಲಾ ಭಾಸಿನ್ ನಿಧನ

Update: 2021-09-25 08:03 GMT
photo: The Indian express

ಹೊಸದಿಲ್ಲಿ: ಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಕವಯಿತ್ರಿ ಹಾಗೂ ಲೇಖಕಿ ಕಮಲಾ ಭಾಸಿನ್ ಶನಿವಾರ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಭಾಸಿನ್ ಅವರು ಬೆಳಿಗ್ಗೆ 3 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು ಎಂದು ಸಾಮಾಜಿಕ ಹೋರಾಟಗಾರ್ತಿ  ಕವಿತಾ ಶ್ರೀವಾಸ್ತವ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಭಾರತ ಹಾಗೂ  ಇತರ ದಕ್ಷಿಣ ಏಷ್ಯಾದ ದೇಶಗಳಲ್ಲಿ ಮಹಿಳಾ ಚಳುವಳಿಯಲ್ಲಿ ಭಾಸಿನ್ ಪ್ರಮುಖ ಧ್ವನಿಯಾಗಿದ್ದರು.

 "ನಮ್ಮ ಆತ್ಮೀಯ ಗೆಳತಿ ಕಮಲಾ ಭಾಸಿನ್ ಇಂದು ಸೆಪ್ಟೆಂಬರ್ 25 ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಿಧನರಾದರು. ಇದು ಭಾರತ ಹಾಗೂ  ದಕ್ಷಿಣ ಏಷ್ಯಾ ಪ್ರದೇಶದ ಮಹಿಳಾ ಚಳುವಳಿಗೆ ದೊಡ್ಡ ಹಿನ್ನಡೆಯಾಗಿದೆ. ಅವರು ಏನೇ ಕಷ್ಟಗಳಿದ್ದರೂ ಜೀವನವನ್ನು ನಿರ್ವಹಿಸಿದರು. ಕಮಲಾ ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಜೀವಿಸುವಿರಿ’’ಎಂದು ಕವಿತಾ ಶ್ರೀವಾಸ್ತವ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News