ಅಮೆರಿಕಕ್ಕಿಂತ ಭಾರತದ ಮಾಧ್ಯಮ ನಡವಳಿಕೆ ಉತ್ತಮವಾಗಿದೆ: ಪ್ರಧಾನಿ ಭೇಟಿ ವೇಳೆ ಬೈಡನ್

Update: 2021-09-25 09:35 GMT

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಶುಕ್ರವಾರ ಶ್ವೇತಭವನದಲ್ಲಿ ತಮ್ಮ  ಮೊದಲ ದ್ವಿಪಕ್ಷೀಯ ಸಭೆಗಾಗಿ ಭೇಟಿಯಾದಾಗ ಒಂದೆರಡು ವಿಚಾರಗಳನ್ನು ಹಂಚಿಕೊಂಡರು. ಭಾರತೀಯ  ಮಾಧ್ಯಮವು ಅಮೆರಿಕದ ಮಾಧ್ಯಮಗಳಿಗಿಂತ 'ಉತ್ತಮ ನಡವಳಿಕೆ ಹೊಂದಿವೆ' ಎಂದು ಹೇಳಿದರು.

2014 ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ 7 ನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು ಅಧ್ಯಕ್ಷ ಬೈಡೆನ್ ಶ್ವೇತಭವನದಲ್ಲಿ ಬರಮಾಡಿಕೊಂಡರು.

ಅಮೆರಿಕದ ಮಾಧ್ಯಮಗಳಿಗಿಂತ ಭಾರತೀಯ ಮಾಧ್ಯಮ ಗಳು ಉತ್ತಮವಾಗಿ ವರ್ತಿಸುತ್ತವೆ. ನಿಮ್ಮ ಅನುಮತಿಯೊಂದಿಗೆ ನಾವು ಪ್ರಶ್ನೆಗಳಿಗೆ ಉತ್ತರಿಸಬಾರದು. ಏಕೆಂದರೆ ಅವರು ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದು ನಾನು ಭಾವಿಸುವೆ ಎನ್ನುವುದಾಗಿ ಬೈಡನ್ ಹೇಳಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News