ಮೆಟ್ರೋ ಕಾಮಗಾರಿ ವೇಳೆ 30 ಅಡಿ ಮಣ್ಣು ಕುಸಿತ

Update: 2021-09-30 11:52 GMT

ಬೆಂಗಳೂರು: ನಗರದ ಟ್ಯಾನರಿ ರಸ್ತೆ ವ್ಯಾಪ್ತಿಯಲ್ಲಿ ಮೆಟ್ರೋ ಕಾಮಗಾರಿಯಿಂದ 30 ಅಡಿ ಮಣ್ಣು ಕುಸಿದಿರುವ ಘಟನೆ ವರದಿಯಾಗಿದೆ.
ಇಲ್ಲಿನ ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಸುರಂಗ ಕೊರೆದು ಟಿಬಿಎಂ ಹೊರಗೆ ಬಂದಿತ್ತು. ಈಗ ಸುರಂಗ ಕೊರೆದ ಬಳಿಕ ಕ್ರಷರ್‍ನಿಂದ ಮಣ್ಣು ಕುಸಿದಿರಬಹುದೆಂದು ತಿಳಿದುಬಂದಿದೆ.

ಮುಚ್ಚಿರುವ ಬಾವಿ ಜಾಗದಲ್ಲಿ ಮಣ್ಣು ಕುಸಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಝಬೀ ಎಂಬವರಿಗೆ ಸೇರಿದ ಜಾಗದಲ್ಲಿ ಮಣ್ಣು ಕುಸಿದಿದ್ದು, ಇದಕ್ಕೆ ಬಿಎಂಆರ್‍ಸಿಎಲ್ ಕಾರಣ ಅಂತ ಮಾಲಕರು ಆರೋಪಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯರು, ಬಿಎಂಆರ್‍ಸಿಲ್ ಹಳ್ಳ ಮುಚ್ಚಲು ಬೆಳಗ್ಗೆಯಿಂದ 2 ಲೋಡ್ ಮಣ್ಣು ತರಿಸಿದ್ದು, ಹಳ್ಳ ಮುಚ್ಚಲು 15ಕ್ಕೂ ಹೆಚ್ಚು ಜನರು ಬಂದಿದ್ದರು. ಗುರುವಾರ ಮುಂಜಾನೆ 3 ಗಂಟೆಗೆ ಮಣ್ಣು ಕುಸಿದಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News