ದಿಲ್ಲಿ: ಖಾಸಗಿ ಮದ್ಯದಂಗಡಿಗಳು ಅ.1ರಿಂದ 45 ದಿನ ಬಂದ್

Update: 2021-09-30 16:40 GMT

ಹೊಸದಿಲ್ಲಿ, ಸೆ.30: ರಾಷ್ಟ್ರ ರಾಜಧಾನಿಯ 276 ಖಾಸಗಿ ಒಡೆತನದ ಮದ್ಯದಂಗಡಿಗಳು ಅ.1ರಿಂದ 45 ದಿನಗಳ ಕಾಲ ಮುಚ್ಚಲಿವೆ. ದಿಲ್ಲಿ ಸರಕಾರವು ನೂತನ ಅಬಕಾರಿ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವುದು ಈ ಮದ್ಯದಂಗಡಿಗಳು ಮುಚ್ಚಲು ಕಾರಣವಾಗಿದೆ. ಈ ನೀತಿಯಡಿ ನಗರದಲ್ಲಿಯ ಎಲ್ಲ 860 ಮದ್ಯ ಮಾರಾಟ ಅಂಗಡಿಗಳನ್ನು ಮುಕ್ತ ಟೆಂಡರ್ ಪ್ರಕ್ರಿಯೆಯ ಮೂಲಕ ಖಾಸಗಿ ಸಂಸ್ಥೆಗಳಿಗೆ ನೀಡಲಾಗುವುದು.

ನೂತನ ನೀತಿಯ ಅಳವಡಿಕೆ ಅವಧಿಯಲ್ಲಿ ಸರಕಾರಿ ಸ್ವಾಮ್ಯದ ಮದ್ಯದಂಗಡಿಗಳು ಮಾತ್ರ ಕಾರ್ಯ ನಿರ್ವಹಿಸಲಿದ್ದು,ನ.16ರಂದು ಅವು ಬಂದ್ ಆಗಲಿವೆ.

ಸರಕಾರದ ಆದೇಶದಿಂದಾಗಿ 26 ಮುನ್ಸಿಪಲ್ ವಾರ್ಡ್ಗಳಲ್ಲಿ ಮದ್ಯಪ್ರಿಯರಿಗೆ ನಿರಾಶೆಯಾಗಲಿದೆ,ಏಕೆಂದರೆ ಈ ವಾರ್ಡ್ಗಳಲ್ಲಿರುವ ಎಲ್ಲ ಮದ್ಯದಂಗಡಿಗಳೂ ಖಾಸಗಿ ಒಡೆತನದ್ದಾಗಿವೆ. 80 ವಾರ್ಡ್ಗಳಲ್ಲಿ ಮದ್ಯದಂಗಡಿಗಳೇ ಇಲ್ಲ.

ಬೇಡಿಕೆ ಹೆಚ್ಚುವ ಸಾಧ್ಯತೆಯಿರುವುದರಿಂದ ಮದ್ಯವನ್ನು ದಾಸ್ತಾನಿಟ್ಟುಕೊಳ್ಳುವಂತೆ ಅಬಕಾರಿ ಇಲಾಖೆಯು ಸರಕಾರಿ ಸ್ವಾಮ್ಯದ ಅಂಗಡಿಗಳಿಗೆ ಸೂಚಿಸಿದೆ.
ನೆರೆಯ ರಾಜ್ಯಗಳಿಂದ ದಿಲ್ಲಿಗೆ ಅಕ್ರಮ ಮದ್ಯಸಾಗಣೆಯಾಗದಂತೆ ಅಬಕಾರಿ ಇಲಾಖೆಯು ಸಿದ್ಧತೆಗಳನ್ನು ಮಾಡಿಕೊಂಡಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News