ಫ್ರಾನ್ಸ್ ಮಾಜಿ ಅಧ್ಯಕ್ಷ ಸರ್ಕೋಜಿಗೆ 1 ವರ್ಷ ಜೈಲುಶಿಕ್ಷೆ

Update: 2021-09-30 17:10 GMT

ಪ್ಯಾರಿಸ್, ಸೆ.30: 2021ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕೆ ಕಾನೂನುಬಾಹಿರವಾಗಿ ವೆಚ್ಚ ಮಾಡಿರುವ ಆರೋಪ ಸಾಬೀತಾಗಿರುವುದರಿಂದ ಫ್ರಾನ್ಸ್ನಮಾಜಿ ಅಧ್ಯಕ್ಷ ನಿಕೊಲಸ್ ಸರ್ಕೊಜಿಗೆ ಒಂದು ವರ್ಷ ಬಂಧನ ಶಿಕ್ಷೆಯನ್ನು ಪ್ಯಾರಿಸ್ ನ್ಯಾಯಾಲಯ ವಿಧಿಸಿದೆ. ಆದರೆ ಈ ತೀರ್ಪಿನ ಹೊರತಾಗಿಯೂ ಸರ್ಕೋಜಿಗೆ ಜೈಲಿಗೆ ಹೋಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಇಲೆಕ್ಟ್ರಾನಿಕ್ಸ್ ಬ್ರೇಸ್ಲೆಟ್ ತೊಟ್ಟುಕೊಂಡು ಅವರು ಮನೆಯಲ್ಲೇ ಜೈಲುಶಿಕ್ಷೆ ಅನುಭವಿಸಬಹುದು ಎಂದೂ ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

2007ರಿಂದ 2012ರವರೆಗೆ ಫ್ರಾನ್ಸ್ ಅಧ್ಯಕ್ಷರಾಗಿದ್ದ ಸರ್ಕೋಜಿ 2012ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಕಾರ್ಯಕ್ಕೆ ನಿಗದಿತ ವೆಚ್ಚಕ್ಕಿಂತ ದುಪ್ಪಟ್ಟು ಅಂದರೆ ಸುಮಾರು 54 ಮಿಲಿಯನ್ ಡಾಲರ್ ವೆಚ್ಚ ಮಾಡಿದ ಆರೋಪ ಎದುರಿಸುತ್ತಿದ್ದರು. ಚುನಾವಣಾ ರ್ಯಾಲಿಗಳಿಗೆ ಹೆಚ್ಚಿನ ಖರ್ಚು ಮಾಡಿದ್ದಾರೆ. ಸರಕಾರದ ಹಣವನ್ನು ಮಿತಿಮೀರಿ ವೆಚ್ಚ ಮಾಡದಂತೆ ಅವರ ಲೆಕ್ಕಪತ್ರ ಸಲಹೆಗಾರರು ನೀಡಿದ ಸಲಹೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದರು.


ಸರ್ಕೋಜಿಯ ಮೇಲಿನ ಆರೋಪ ಸಾಬೀತಾಗಿದೆ. ತಮ್ಮ ಪ್ರಚಾರಕಾರ್ಯದ ತಂಡ ನಿಗದಿತ ಮಿತಿ ಮೀರಿ ಖರ್ಚು ಮಾಡುತ್ತಿರುವುದು ತಿಳಿದಿದ್ದೂ ಸರ್ಕೋಜಿ ಸುಮ್ಮನಿದ್ದರು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸರ್ಕೋಜಿ ವಿರುದ್ಧದ ಈ ತೀರ್ಪಿನಿಂದ ಅವರ ರಾಜಕೀಯ ವೃತ್ತಿಜೀವನ ಖಂಡಿತಾ ಮುಕ್ತಾಯವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News