ಕಟ್ಟಡಗಳ ಸ್ಟ್ರಕ್ಚರಲ್ ಎಬಿಲಿಟಿ ಟೆಸ್ಟ್ ಮಾಡಿಸುವಂತೆ ನೋಟಿಸ್: ಬಿಬಿಎಂಪಿ

Update: 2021-10-10 12:06 GMT

ಬೆಂಗಳೂರು, ಅ.10: ಇತ್ತೀಚೆಗೆ ನಗರದಲ್ಲಿ ಕಟ್ಟಡಗಳ ಕುಸಿತ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬಿಬಿಎಂಪಿ ಪಾಲಕೆ ವ್ಯಾಪ್ತಿಯ ಕಟ್ಟಡಗಳ ಸ್ಟ್ರಕ್ಚರಲ್ ಎಬಿಲಿಟಿ ಟೆಸ್ಟ್‍ಗೆ ಮಾಡಿಸಲು ತಿಳಿಸಿದೆ. ಈ ಕುರಿತು ಕಟ್ಟಡಗಳ ಪರೀಕ್ಷೆ ಮಾಡಿಸುವಂತೆ ಮಾಲಕರಿಗೆ ನೋಟೀಸ್ ಸಹ ರವಾನಿಸಿದೆ. 

ಕಳೆದ ಗುರುವಾರ ಕಸ್ತೂರಿನಗರದ ಡಾಕ್ಟರ್ಸ್ ಲೇಔಟ್‍ನಲ್ಲಿ ಹಳೆಯದಲ್ಲದ ಕಟ್ಟಡವು ಕುಸಿದಿತ್ತು. ಹೀಗಾಗಿ ಆ ಬಡಾವಣೆಯಲ್ಲಿರುವ ಕಟ್ಟಡಗಳ ಸ್ಟ್ರಕ್ಚರಲ್ ಎಬಿಲಿಟಿ ಟೆಸ್ಟ್ ಮತ್ತು ಕಟ್ಟಡಗಳ ನಿವೇಶನದ ಮಣ್ಣಿನ ಪರೀಕ್ಷೆ ಮಾಡಿಸುವ ನಿಟ್ಟಿನಲ್ಲಿ, 25ಕ್ಕೂ ಅಧಿಕ ಮನೆ ಮಾಲಕರಿಗೆ ನೋಟಿಸ್ ಜಾರಿಗೊಳಿಸಿದೆ. ಮಾನ್ಯತೆ ಪಡೆದ ಇಂಜಿನಿಯರ್‍ಗಳಿಂದಲೇ ಟೆಸ್ಟ್ ಮಾಡಿಸಿ, ವರದಿ ನೀಡುವಂತೆ ಸೂಚಿಸಿದೆ.

ನಿಗದಿತ ದಿನದಲ್ಲಿ ಮಾಲಕರು ವರದಿ ನೀಡದಿದ್ದಲ್ಲಿ ಕಟ್ಟಡ ಅನಾಹುತ, ಕಟ್ಟಡ ಕುಸಿತ, ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಉಂಟಾದಲ್ಲಿ ಕಟ್ಟಡದ ಮಾಲಕರೇ ಹೊಣೆಯಾಗಿರುತ್ತಾರೆ. ಅಲ್ಲದೇ, ಕಟ್ಟಡವು ಏಕಪಕ್ಷೀಯವಾಗಿ ವಾಸ ಮಾಡುವುದಕ್ಕೆ ಯೋಗ್ಯವಲ್ಲ ಎಂದು ಬಿಬಿಎಂಪಿ ಪರಿಗಣಿಸುತ್ತದೆ ಎಂದು ಎಚ್ಚರಿಕೆ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News