ಕಾಶ್ಮೀರದಲ್ಲಿ ನಾಗರಿಕರ ಕೊಲೆ: 700ಕ್ಕೂ ಅಧಿಕ ʼಭಯೋತ್ಪಾದಕರೊಂದಿಗೆ ಸಹಾನುಭೂತಿʼಯಿರುವವರ ಬಂಧನ

Update: 2021-10-10 15:25 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಆರು ದಿನಗಳ ಅವಧಿಯಲ್ಲಿ ಕಾಶ್ಮೀರಿ ಪಂಡಿತ್, ಸಿಖ್ ಮತ್ತು ಮುಸ್ಲಿಂ ಸಮುದಾಯದವರು ಸೇರಿದಂತೆ ಏಳು ನಾಗರಿಕರನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ 700ಕ್ಕೂ ಅಧಿಕ ಜನರನ್ನು ಬಂಧಿಸಿವೆ ಎಂದು ndtv.com ವರದಿ ಮಾಡಿದೆ.

ಬಂಧಿತರಾಗಿರುವ ಹಲವರು ನಿಷೇಧಿತ ಜಮಾತ್-ಇ-ಇಸ್ಲಾಮಿ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಾರೆ ಅಥವಾ ಶಂಕಿತ ಭೂಗತ ಕೆಲಸಗಾರರ (OGW) ಪಟ್ಟಿಯಲ್ಲಿರುವ ಜನರು ಮತ್ತು ಶ್ರೀನಗರ, ಗಂದೇರ್ಬಲ್, ಬುಡ್ಗಾಮ್ ಮತ್ತು ದಕ್ಷಿಣ ಕಾಶ್ಮೀರದ ಇತರ ಪ್ರದೇಶಗಳಿಂದ ಬಂದವರು ಎಂದು ನಂಬಲಾಗಿದೆ.

"(ಕಾಶ್ಮೀರ) ಕಣಿವೆಯಲ್ಲಿ ದಾಳಿಯ ಸರಪಳಿಯನ್ನು ಮುರಿಯಲು ಅವರನ್ನು ಬಂಧಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು NDTV ಗೆ ತಿಳಿಸಿದರು. ಅಧಿಕಾರಿಯು, ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಆಮೂಲಾಗ್ರತೆಯ ಹೆಚ್ಚಳದಿಂದ ದಾಳಿಗೆ ಉತ್ತೇಜನ ನೀಡಿರಬಹುದು ಮತ್ತು ಕೊಲೆಗಾರರು "ಸುಲಭ" ಗುರಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

ಈ ಕೊಲೆಗಳು ಈಗಾಗಲೇ ಉದ್ವಿಗ್ನವಾಗಿರುವ ಕಾಶ್ಮೀರ ಕಣಿವೆಯಲ್ಲಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿದ್ದು, ಪ್ರತಿಪಕ್ಷದ ನಾಯಕರು ಮತ್ತು ಸ್ಥಳೀಯರು ದಾಳಿಗಳನ್ನು ತಡೆಯುವಲ್ಲಿ ಆಡಳಿತದ ಅಸಮರ್ಥತೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಇತ್ತೀಚೆಗೆ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಾದ ಸುಪುಂದರ್ ಕೌರ್ (ಸಿಖ್) ಮತ್ತು ದೀಪಕ್ ಚಂದ್ (ಹಿಂದೂ), ಅವರನ್ನು ಗುರುವಾರ ಶ್ರೀನಗರದಲ್ಲಿ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News