ಗರ್ಬಾ ಕಾರ್ಯಕ್ರಮ ನಡೆಯುತ್ತಿದ್ದ ಕಾಲೇಜಿನ ಹೊರಗಿದ್ದ ಮುಸ್ಲಿಂ ಯುವಕರ ಮೇಲೆ ಬಜರಂಗದಳ ಕೆಂಗಣ್ಣು, ಪೋಲೀಸರ ವಶಕ್ಕೆ

Update: 2021-10-12 07:47 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭೋಪಾಲ್ ನಗರದ ಆಕ್ಸ್ ಫರ್ಡ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗರ್ಬಾ ಕಾರ್ಯಕ್ರಮದ ಸಂದರ್ಭ ಕಾಲೇಜಿನ ಆವರಣದ ಹೊರಗೆ ನಿಂತಿದ್ದ  ಅದೇ ಕಾಲೇಜಿನ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳ ಸಹಿತ ನಾಲ್ಕು ಮಂದಿಯನ್ನು ಬಜರಂಗದಳ ಕಾರ್ಯಕರ್ತರು ರವಿವಾರ ರಾತ್ರಿ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ ಎಂದು Indian Express ವರದಿ ಮಾಡಿದೆ.

ಪೊಲೀಸರು ವಶಪಡಿಸಿಕೊಂಡ ವಿದ್ಯಾರ್ಥಿಗಳು ಅದ್ನಾನ್ ಶಾಹ್ ಹಾಗೂ ಖಾದಿರ್ ಮನ್ಸೂರಿ ಆಗಿದ್ದರೆ ಉಳಿದಿಬ್ಬರು- ಉಮರ್ ಖಾಲಿದ್ ಹಾಗೂ ಸಯ್ಯದ್ ಸಾಕೀಬ್ ಅವರ ಸ್ನೇಹಿತರಾಗಿದ್ದರು.

ಈ ಗರ್ಬಾ ನೃತ್ಯ ಕಾರ್ಯಕ್ರಮ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ನಡೆಸಲಾಗಿದೆ ಹಾಗೂ 'ಲವ್ ಜಿಹಾದ್' ಪ್ರೋತ್ಸಾಹಿಸುತ್ತಿದೆ ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಉಪದ್ರವ ಸೃಷ್ಟಿಸಿದ್ದಕ್ಕೆ ನಾಲ್ಕು ಮಂದಿಯನ್ನೂ ಜೈಲಿಗೆ ಕಳುಹಿಸಲಾಗಿದೆ. ಅವರ ಕುಟುಂಬಗಳು ಜಾಮೀನು ಬಾಂಡ್ ನೀಡಲು ವಿಫಲವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಕಾಲೇಜಿಗೆ 800 ಮಂದಿಯ ಭಾಗವಹಿಸುವಿಕೆಯೊಂದಿಗೆ ಕಾರ್ಯಕ್ರಮ ನಡೆಸಲು ಅನುಮತಿಸಲಾಗಿತ್ತಾದರೂ 3000 ಟಿಕೆಟ್‍ಗಳನ್ನು ಮಾರಾಟ ಮಾಡಲಾಗಿತ್ತು ಎಂದು ಬಜರಂಗದಳ ಮತ್ತು ವಿಹಿಂಪ ಜಿಲ್ಲಾ ಉಸ್ತುವಾರಿ ತರುಣ್ ದೇವ್ಡ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಆದರೆ ನಾಲ್ಕು ಮಂದಿ ಯುವಕರನ್ನೂ ಅವರ ಮುಸ್ಲಿಮರಾಗಿದ್ದಾರೆಂಬ ಕಾರಣಕ್ಕೆ ಗುರಿ ಮಾಡಲಾಗಿದೆ ಎಂಬ ದೂರು ವ್ಯಾಪಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News