ವಿದ್ಯುತ್ ಬೇಡಿಕೆ ಪೂರೈಸಲು ಮಿಶ್ರ ಕಲ್ಲಿದ್ದಲು ಬಳಸಲು ವಿದ್ಯುತ್ ಸ್ಥಾವರಗಳಿಗೆ ಅನುಮತಿ

Update: 2021-10-12 16:44 GMT

ಹೊಸದಿಲ್ಲಿ,ಅ.12: ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಕಲ್ಲಿದ್ದಲು ಆಮದನ್ನು ತ್ವರಿತಗೊಳಿಸಲು ವಿದ್ಯುತ್ ಉತ್ಪಾದಕರಿಗೆ ಮಂಗಳವಾರ ಅನುಮತಿ ನೀಡಿದ ಕೇಂದ್ರವು,ಶೇ.10ರಷ್ಟು ಆಮದು ಕಲ್ಲಿದ್ದಲನ್ನು ಸ್ಥಳೀಯ ಕಲ್ಲಿದ್ದಲಿನೊಂದಿಗೆ ಮಿಶ್ರಗೊಳಿಸಿ ಬಳಸಲು ಅವಕಾಶ ನೀಡಿದೆ.

ಜಾಗತಿಕ ಬೆಲೆಗಳಲ್ಲಿ ತೀವ್ರ ಏರಿಕೆಯ ನಡುವೆ ದೇಶದ ಹಲವಾರು ವಿದ್ಯುತ್ ಸ್ಥಾವರಗಳ ಬಳಿ ಕಲ್ಲಿದ್ದಲು ದಾಸ್ತಾನು ಕ್ಷೀಣಿಸಿರುವುದರಿಂದ ವಿದ್ಯುತ್ ಪುರೈಕೆಯಲ್ಲಿ ಭಾರೀ ವ್ಯತ್ಯಯವುಂಟಾಗುತ್ತಿದೆ.

ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾದಿಂದ ಕಲ್ಲಿದ್ದಲು ಪೂರೈಕೆಯು ವಿದ್ಯುತ್ ಬಳಕೆಯಲ್ಲಿನ ಹೆಚ್ಚಳಕ್ಕೆ ಅನುಗುಣವಾಗಿಲ್ಲ,ಹೀಗಾಗಿ ಕಲ್ಲಿದ್ದಲು ಆಮದು ಕುರಿತು ಸರಕಾರಿ ನೀತಿಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ ಎಂದು ಕೇಂದ್ರವು ತನ್ನ ಆದೇಶದಲ್ಲಿ ತಿಳಿಸಿದೆ.

ಕೋವಿಡ್ ನಿರ್ಬಂಧಗಳನ್ನು ಹಿಂದೆಗೆದುಕೊಂಡ ಬಳಿಕ ಆರ್ಥಿಕತೆಯಲ್ಲಿ ಚೇತರಿಕೆಯೊಂದಿಗೆ ದೇಶದಲ್ಲಿ ವಿದ್ಯುತ್ ಬೇಡಿಕೆಯೂ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News