ಪ್ರಯಾಣ ನಿರ್ಬಂಧಿತ ಪಟ್ಟಿಯಿಂದ ಭಾರತ ಸಹಿತ 5 ದೇಶಗಳನ್ನು ಕೈಬಿಟ್ಟ ಸಿಂಗಾಪುರ

Update: 2021-10-23 18:36 GMT
photo:twitter/@AlArabiya_Eng

ಸಿಂಗಾಪುರ, ಅ.23: ಕೋವಿಡ್19 ಸಾಂಕ್ರಾಮಿಕದ ಹಾವಳಿಯ ಹಿನ್ನೆಲೆಯಲ್ಲಿ ತಾನು ವಿಧಿಸಿರುವ ಪ್ರಯಾಣ ನಿರ್ಬಂಧಿತ ರಾಷ್ಟ್ರಗಳ ಪಟ್ಟಿಯಿಂದ ಭಾರತ ಹಾಗೂ ದಕ್ಷಿಣ ಏಶ್ಯದ ಐದು ದೇಶಗಳನ್ನು ತೆಗೆದುಹಾಕಿದೆ.

ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾ ದೇಶಗಳಿಗೆ 14 ದಿನಗಳ ಪ್ರಯಾಣಿಸಿರುವ ಇತಿಹಾಸ ಹೊಂದಿರುವವರಿಗೆ ಸಿಂಗಾಪುರ ಪ್ರವೇಶಿಸಲು ಹಾಗೂ ಸಿಂಗಾಪುರದ ಮೂಲಕ ತೆರಳಲು ಅನುಮತಿ ನೀಡಲಾಗುವುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಆದಾಗ್ಯೂ ಈ ದೇಶಗಳ ಪ್ರಯಾಣಿಕರು ಅತ್ಯಂತ ಕಟ್ಟುನಿಟ್ಟಿನ ಗಡಿನಿಬಂಧ ಕ್ರಮಗಳಿಗೆ ಒಳಪಡಬೇಕಾಗಿದ್ದು, ಮೀಸಲಾದ ಘಟಕದಲ್ಲಿ 10 ದಿನಗಳವರೆಗೆ ಉಳಿದುಕೊಳ್ಳಬೇಕಾಗುತ್ತದೆ ಎಂದು ನೂತನ ಮಾರ್ಗದರ್ಶಿ ಸೂತ್ರ ತಿಳಿಸಿದೆ. ದಕ್ಷಿಣ ಏಶ್ಯದ ಆರು ರಾಷ್ಟ್ರಗಳಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ತಾನು ಪರಾಮರ್ಶಿಸಿರುವುದಾಗಿ ಸಚಿವಾಲಯ ತಿಳಿಸಿದೆ. ಈ ದೇಶಗಳಲ್ಲಿ ಕೆಲವು ಸಮಯದಿಂದ ಕೋವಿಡ್19 ಪರಿಸ್ಥಿತಿಯಲ್ಲಿ ನಿಯಂತ್ರಣಕ್ಕೆ ಬಂದಿರುವುದನ್ನು ಸಿಂಗಾಪುರ ಗಮನಿಸಿದೆಯೆಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News