ರೈತರ ಹತ್ಯೆ ಪ್ರಕರಣ:ಬಂಧಿತ ಕೇಂದ್ರ ಸಚಿವರ ಪುತ್ರ ಆಸ್ಪತ್ರೆಗೆ ದಾಖಲು ಸಾಧ್ಯತೆ

Update: 2021-10-24 05:32 GMT

ಲಕ್ನೊ: ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರದ ಆರೋಪದ ಮೇಲೆ ಬಂಧಿತರಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾನನ್ನು ಶಂಕಿತ ಡೆಂಗಿ ರೋಗಲಕ್ಷಣಗಳ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಆತ (ಮಿಶ್ರಾ) ಡೆಂಗಿಯಿಂದ ಬಳಲುತ್ತಿದ್ದಾನೆಯೇ ಎಂದು ದೃಢಪಟ್ಟಿಲ್ಲ. ಮಿಶ್ರಾನ ಮಾದರಿಯನ್ನು ಶುಕ್ರವಾರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಚಿತ್ರ ಸ್ಪಷ್ಟವಾಗುತ್ತದೆ" ಎಂದು ಲಖಿಂಪುರ ಖೇರಿ ಜಿಲ್ಲಾ ಜೈಲಿನ ಅಧೀಕ್ಷಕ ಪಿ.ಪಿ. ಸಿಂಗ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಅಕ್ಟೋಬರ್ 3 ರಂದು ಸಚಿವರ ಮೂರು ಬೆಂಗಾವಲು ವಾಹನ ಪ್ರತಿಭಟನಾನಿರತ ರೈತರ ಮೇಲೆ ಉದ್ದೇಶಪೂರ್ವಕವಾಗಿ ಹರಿದ ಪರಿಣಾಮವಾಗಿ ನಾಲ್ವರು ರೈತರು ಮತ್ತು ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದರು. ಬೆಂಗಾವಲು ವಾಹನದಲ್ಲಿ  ಒಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರಿಗೆ ಸೇರಿತ್ತು. ಸಚಿವರ ಪುತ್ರನನ್ನು ಘಟನೆ ನಡೆದು ಐದು ದಿನಗಳ ನಂತರ ಸುಪ್ರೀಂಕೋರ್ಟ್ ನ ಮಧ್ಯಪ್ರವೇಶದ ಬಳಿಕ ಅಕ್ಟೋಬರ್ 9 ರಂದು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News