ಏಕಾಏಕಿ ಕುಸಿದ ಕ್ರೇನ್: 'ನಮ್ಮ ಮೆಟ್ರೋ' ಕಾಮಗಾರಿ ವೇಳೆ ತಪ್ಪಿದ ಅನಾಹುತ

Update: 2021-10-24 12:51 GMT

ಬೆಂಗಳೂರು, ಅ.24: ನಮ್ಮ ಮೆಟ್ರೋ ಕಾಮಗಾರಿ ವೇಳೆ ಅವಘಡ ಸಂಭವಿಸಿದ್ದು, 40 ಅಡಿ ಎತ್ತರದಿಂದ ಕ್ರೇನ್ ಕೆಳಗೆ ಬಿದ್ದಿರುವ ಘಟನೆ ರವಿವಾರ ನಡೆದಿದೆ.

ಇಲ್ಲಿನ ನಗರದ ಸಿಲ್ಕ್ ಬೋರ್ಡ್ ಬಳಿ ನಮ್ಮ ಮೆಟ್ರೋ ಫೇಸ್-2 ಕಾಮಗಾರಿ ನಡೆಯುತ್ತಿದ್ದಾಗ ಮೆಟ್ರೋ ರೈಲ್ ಮಾರ್ಗದ ಸೆಗ್ಮೆಂಟ್ಸ್ ಜೋಡಣೆ ಸಮಯದಲ್ಲಿ ರವಿವಾರ ಬೆಳಗ್ಗೆ 6.30ರ ಸುಮಾರಿಗೆ ಲಾಂಚಿಂಗ್ ಗಾರ್ಡ್ ಕ್ರೇನ್ ಯಂತ್ರ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ. ಈ ಸಂದರ್ಭದಲ್ಲಿ ಕರ್ತವ್ಯನಿರತ ನೂರಾರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತೊಂದೆಡೆ ರೈಲ್ವೆ ಕೆಳಸೇತವೆ ಹಾಕಿದ್ದ ಕಬ್ಬಿಣದ ಶೀಟ್ ಬಿಎಂಟಿಸಿ ಬಸ್ ಮೇಲೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಆನಂದ್ ರಾವ್ ಸರ್ಕಲ್ ಹಾಗೂ ಶೇಷಾದ್ರಿಪುರಂ ಮಾರ್ಗ ಮಧ್ಯೆಯಲ್ಲಿರುವ ರೈಲ್ವೆ ಕೆಳಸೇತುವೆ ಬಳಿ ರವಿವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಬಾರಿ ದುರಂತ ತಪ್ಪಿದೆ. ಇನ್ನು, ಕಬ್ಬಿಣದ ಶೀಟ್‍ಗಳು ಜನರ ಮೇಲೆ ಬಿದ್ದಿದ್ದರೆ, ಯಾರು ಹೊಣೆ ಎಂದು ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News