ಆರ್ಯನ್ ಪ್ರಕರಣ: ಶಾರೂಕ್ ಖಾನ್‌ಗೆ ಸಚಿವ ಅಠಾವಳೆ ಸಲಹೆ ಏನು ಗೊತ್ತೇ?

Update: 2021-10-25 04:06 GMT
ರಾಮದಾಸ್ ಅಠಾವಳೆ(ಎಡಬದಿ) ಮತ್ತು ಆರ್ಯನ್ ಖಾನ್ (Photo source: PTI)

ಮುಂಬೈ, ಅ.25: ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿರುವ ಆರ್ಯನ್ ಖಾನ್ ಅವರನ್ನು ಡಿ ಅಡಿಕ್ಷನ್ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ರಾಮದಾಸ್ ಅಠಾವಳೆ, ಶಾರೂಕ್ ಖಾನ್‌ಗೆ ಸಲಹೆ ಮಾಡಿದ್ದಾರೆ.

"ಎಳೆ ವಯಸ್ಸಿನಲ್ಲೇ ಡ್ರಗ್ಸ್ ತೆಗೆದುಕೊಳ್ಳುವುದು ಒಳ್ಳೆಯದಲ್ಲ; ಆರ್ಯನ್ ಖಾನ್‌ಗೆ ಭವಿಷ್ಯವಿದೆ. ಆತನನ್ನು ನಮ್ಮ ಸಚಿವಾಲಯದ ಅಧೀನದಲ್ಲಿರುವ ಡಿ ಅಡಿಕ್ಷನ್ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವಂತೆ ಶಾರೂಕ್ ಖಾನ್‌ಗೆ ಸಲಹೆ ನೀಡುತ್ತಿದ್ದೇನೆ" ಎಂದು ಎಎನ್‌ಐ ಜತೆ ಮಾತನಾಡಿದ ಅವರು ಹೇಳಿದರು.

"ಆರ್ಯನ್ ಖಾನ್‌ನಲ್ಲಿ ಜೈಲಿನಲ್ಲಿ ಇಡುವ ಬದಲು ಒಂದು ಅಥವಾ ಎರಡು ತಿಂಗಳು ಡಿ ಅಡಿಕ್ಷನ್ ಕೇಂದ್ರದಲ್ಲಿ ಇಡಬೇಕು. ದೇಶದಲ್ಲಿ ಅಂಥ ಹಲವು ಕೇಂದ್ರಗಳಿವೆ. ಒಂದೆರಡು ತಿಂಗಳಲ್ಲಿ ಆರ್ಯನ್ ಮಾದಕ ವ್ಯಸನದಿಂದ ಗುಣಮುಖರಾಗಬಹುದು" ಎಂದು ಅಭಿಪ್ರಾಯಪಟ್ಟರು. ಇಂಥ ಪ್ರಕರಣಗಳಲ್ಲಿ ಆರೋಪಿಗಳನ್ನು ಜೈಲಿಗೆ ಕಳುಹಿಸದಂತೆ ಹೊಸ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News