11 ಕೋಟಿ ಮಂದಿಯ ಕೋವಿಡ್ ವಿರುದ್ಧದ ಲಸಿಕೆಯ 2ನೇ ಡೋಸ್‌ ಅವಧಿ ಮುಕ್ತಾಯ : ಕೇಂದ್ರ ಸರ್ಕಾರ

Update: 2021-10-28 15:34 GMT

ಹೊಸದಿಲ್ಲಿ,ಅ.28: ಎರಡು ಡೋಸ್‌ಗಳ ನಡುವಿನ ನಿಗದಿತ ವಿರಾಮದ ಅವಧಿ ಮುಗಿದಿದ್ದರೂ 10.34 ಕೋಟಿಗೂ ಅಧಿಕ ಭಾರತೀಯರು ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು ಪಡೆದುಕೊಂಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಬುಧವಾರ ನಡೆದ ಲಸಿಕೆ ಅಭಿಯಾನ ಪುನರ್‌ಪರಿಶೀಲನೆ ಸಭೆಯಲ್ಲಿ ತಿಳಿಸಿದರು.

ಲಸಿಕೆ ನೀಡಿಕೆಯ ವೇಗವನ್ನು ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವಂತೆ ವಿವಿಧ ರಾಜ್ಯಗಳ ಆರೋಗ್ಯ ಸಚಿವರಿಗೆ ಮಾಂಡವೀಯ ಸೂಚಿಸಿದ್ದಾರೆ ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

2021,ನವಂಬರ್ ಅಂತ್ಯದೊಳಗೆ ಎಲ್ಲ ಅರ್ಹ ಪ್ರಜೆಗಳಿಗೆ ಲಸಿಕೆಯ ಮೊದಲ ಡೋಸ್‌ನ್ನು ನೀಡಲು ಪಣ ತೊಡೋಣ ಎಂದು ಸಭೆಯಲ್ಲಿ ಹೇಳಿದ ಮಾಂಡವೀಯ,ರಾಜ್ಯಗಳ ಬಳಿ 12 ಕೋಟಿ ಡೋಸ್‌ಗೂ ಲಸಿಕೆ ಲಭ್ಯವಿದೆ ಎಂದು ತಿಳಿಸಿದರು.

3.92 ಕೋಟಿಗೂ ಅಧಿಕ ಲಸಿಕೆ ಫಲಾನುಭವಿಗಳು ತಮ್ಮ ಎರಡನೇ ಡೋಸ್ ಪಡೆದುಕೊಳ್ಳುವಲ್ಲಿ ಆರು ವಾರಗಳಿಗೂ ಹೆಚ್ಚು ಮತ್ತು ಸುಮಾರು 1.57 ಜನರು ನಾಲ್ಕರಿಂದ ಆರು ವಾರಗಳಷ್ಟು ಹಿಂದೆ ಬಿದ್ದಿದ್ದಾರೆ ಎಂದು ಸರಕಾರಿ ದತ್ತಾಂಶಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News