ಉಯಿಘರ್ ಮುಸ್ಲಿಂ ಸಮಾವೇಶಕ್ಕೆ ಆತಿಥ್ಯ ವಹಿಸಲು ಪ್ರೇಗ್ ಮ್ಯಾರಿಯೆಟ್ ಹೊಟೇಲ್ ನಕಾರ‌

Update: 2021-11-20 17:09 GMT
photo:AFP

ಪ್ರೇಗ್,ನ.20: ಚೀನಾದಲ್ಲಿ ಮಾನವಹಕ್ಕುಗಳ ದಮನದ ಬಗ್ಗೆ ವಿಶ್ವದ ಗಮನಸೆಳೆಯಲು ಜೆಕ್ ಗಣರಾಜ್ಯದಲ್ಲಿ ಆಯೋಜಿಸಲಾಗಿರುವ ಸಮಾವೇಶದ ಆತಿಥ್ಯ ವಹಿಸಿಕೊಳ್ಳಲು ರಾಜಧಾನಿ ಪ್ರೇಗ್‌ನಲ್ಲಿರುವ ಮಾರಿಯಾಟ್ ಹೊಟೇಲ್ ನಿರಾಕರಿಸಿದೆ.

ರಾಜಕೀಯ ತಾಟಸ್ಥ ನಿಲುವಿನ ಕಾರಣಗಳಿಂದಾಗಿ ತಾನು ವಿಶ್ವ ಉಯಿಘರ್ ಕಾಂಗ್ರೆಸ್‌ನ ಸಮಾವೇಶದ ಅತಿಥ್ಯ ವಹಿಸಲು ನಿರಾಕರಿಸಿರುವುದಾಗಿ ಪ್ರೇಗ್ ಮಾರಿಯಾಟ್‌ಹೊಟೇಲ್‌ನ ವಕ್ತಾರರು ತಿಳಿಸಿದ್ದಾರೆ.

ಸಮಾವೇಶದ ಆತಿಥ್ಯವನ್ನು ವಹಿಸಿಕೊಳ್ಳಲು ಸಾಧ್ಯವಾಗದೆ ಇರುವುದಕ್ಕಾಗಿ ಪ್ರೇಗ್ ಮಾರಿಯಾಟ್ನ ಆಡಳಿತವರ್ಗವು ವಿಶ್ವ ಉಯಿಘರ್ ಕಾಂಗ್ರೆಸ್‌ನ ಆಯೋಜಕರ ಕ್ಷಮೆಯಾಚಿಸಿದೆಯೆಂದು ಮಾರಿಯಾಟ್ ಇಂಟರ್ನ್ಯಾಶನಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ ದುರದೃಷ್ಟವಶಾತ್, ನಿಮಗೆ ನಮ್ಮ ಹೊಟೇಲ್ ನ ಆವರಣವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲೆಂದು ನಾನು ನಿಮಗೆ ಮಾಹಿತಿ ನೀಡುತ್ತಿದ್ದೇವೆ. ನಮ್ಮ ಕಾರ್ಪೊರೇಟ್ ಆಡಳಿತ ಮಂಡಳಿಯ ಜೊತೆ ಈ ಇಡೀ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ರಾಜಕೀಯ ತಾಟಸ್ಥದ ನಿಲುವಿನ ಕಾರಣಗಳಿಂದಾಗಿ ನಾವು ಈ ರೀತಿಯ ರಾಜಕೀಯ ವಿಷಯಗಳ ಕುರಿತ ಕಾರ್ಯಕ್ರಮಗಳಿಗಾಗಿ ಸ್ಥಳ ನೀಡಲು ಸಾಧ್ಯವಿಲ್ಲವೆಂದು’’ ಪ್ರೇಗ್ ಮಾರಿಯಾಟ್,ಸಮ್ಮೇಳನದ ಆಯೋಜಕರಿಗೆ ಕಳಹಿಸಿದ ಈ ಮೇಲ್ ಪತ್ರದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News