ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆಯೊಡ್ಡಿದ ಆರೋಪಿ ರಾಮಗಣೇಶ್ ಗೆ ಜಾಮೀನು

Update: 2021-11-22 07:47 GMT
ಸಾಂದರ್ಭಿಕ ಚಿತ್ರ

ಹೈದರಾಬಾದ್: ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪುಟ್ಟ ಮಗಳಿಗೆ ಆನ್ ಲೈನ್ ಮೂಲಕ ಅತ್ಯಾಚಾರ ಬೆದರಿಕೆಯೊಡ್ಡಿದ ಆರೋಪದ ಮೇಲೆ ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಹೈದರಾಬಾದ್ ಐಐಟಿ ಪದವೀಧರ, 23 ವರ್ಷದ ರಾಮಗಣೇಶ್ ಅಕುಬತಿನಿ ಎಂಬಾತನಿಗೆ ಮುಂಬೈನ ನ್ಯಾಯಾಲಯವೊಂದು ಕಳೆದ ಶನಿವಾರ ಜಾಮೀನು ಮಂಜೂರುಗೊಳಿಸಿದೆ.

ಭಾರತ ಇತ್ತೀಚೆಗೆ ಟಿ-20 ವಿಶ್ವಕಪ್ ಪಂದ್ಯಾಟದಲ್ಲಿ ಪಾಕಿಸ್ತಾನ ತಂಡದೆದುರು ಸೋತ ನಂತರ ಯುವಕ ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆಯೊಡ್ಡಿದ್ದ. ಐಐಟಿಯಿಂದ ಪದವಿ ಪಡೆದ ನಂತರ ಈತ ಬೆಂಗಳೂರಿನಲ್ಲಿ ಮುಖ್ಯ ಕಾರ್ಯಾಲಯ ಹೊಂದಿರುವ ಫುಡ್ ಡೆಲಿವರಿ ಆ್ಯಪ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ.

ಆತನ ಜಾಮೀನು ಅರ್ಜಿಯನ್ನು ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ರೂ 50,000 ಬಾಂಡ್ ಮತ್ತು ಎರಡು ಶ್ಯೂರಿಟಿ ಆಧಾರದಲ್ಲಿ ಆತನಿಗೆ ಜಾಮೀನು ನೀಡಲಾಗಿದೆ. ಜಾಮೀನು ಶರತ್ತುಗಳ ಆಧಾರದಲ್ಲಿ ಆತ ಪ್ರಕರಣ ವ್ಯಾಪ್ತಿ ಠಾಣೆಯಲ್ಲಿ ಒಂದು ತಿಂಗಳ ಕಾಲ ವಾರಕ್ಕೆ ಎರಡು ಬಾರಿ ಹಾಜರಾಗಬೇಕಿದೆ.

ಆರೋಪಿಯು ತೆಲಂಗಾಣದ ಸಂಗಾರೆಡ್ಡಿ ನಿವಾಸಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News