ಗಾಳಿ ಗುಣಮಟ್ಟ ಸುಧಾರಣೆ; ಕಟ್ಟಡ ನಿರ್ಮಾಣ ಕಾಮಗಾರಿ ನಿಷೇದ ಹಿಂಪಡೆದ ದಿಲ್ಲಿ ಸರಕಾರ

Update: 2021-11-22 14:41 GMT

ಹೊಸದಿಲ್ಲಿ, ನ. 22: ವಾಯು ಗುಣಮಟ್ಟ ಸುಧಾರಣೆಯಾಗಿರುವುದರಿಂದ ಹಾಗೂ ಕಾರ್ಮಿಕರಿಗೆ ಅನನುಕೂಲತೆ ಉಂಟಾಗುವ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಹಾಗೂ ಧ್ವಂಸಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ದಿಲ್ಲಿ ಸರಕಾರ ಹಿಂಪಡೆದಿದೆ ಎಂದು ಪರಿಸರ ಸಚಿವ ಗೋಪಾಲ ರಾಯ್ ಸೋಮವಾರ ಹೇಳಿದ್ದಾರೆ.

ಬುಧವಾರ ನಡೆಯಲಿರುವ ಪುನರ್ ಪರಿಶೀಲನಾ ಸಭೆಯಲ್ಲಿ ಶಾಲೆ, ಕಾಲೇಜುಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳ ಮರು ಆರಂಭ, ಸರಕಾರಿ ಸಿಬ್ಬಂದಿ ವರ್ಕ್ ಫ್ರಂ ಹೋಮ್ ಕುರಿತಂತೆ ಸರಕಾರ ಪರಿಶೀಲಿಸಲಿದೆ ಎಂದು ರಾಯ್ ಹೇಳಿದರು. ‘‘ಪರಿಸ್ಥಿತಿ ಸುಧಾರಿಸಿದರೆ ಅತ್ಯವಶ್ಯಕವಲ್ಲದ ವಸ್ತುಗಳನ್ನು ಸಾಗಿಸುವ ಸಿಎನ್ಜಿಯಿಂದ ಕಾರ್ಯಾಚರಿಸುವ ಟ್ರಕ್ಗಳು ದಿಲ್ಲಿ ಪ್ರವೇಶಿಸುವ ಬಗ್ಗೆ ಕೂಡ ನಾವು ಚರ್ಚೆ ನಡೆಸಲಿದ್ದೇವೆ’’ ಎಂದು ಅವರು ತಿಳಿಸಿದರು.

ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಹಾಗೂ ಅದರಿಂದಾಗುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಅಗತ್ಯವಲ್ಲದ ವಸ್ತುಗಳನ್ನು ಸಾಗಾಟ ಮಾಡುವ ಟ್ರಕ್ ಗಳಿಗೆ ವಿಧಿಸಿದ ನಿರ್ಬಂಧ ಹಾಗೂ ತನ್ನ ಉದ್ಯೋಗಿಗಳು ನವೆಂಬರ್ 26ರ ವರೆಗೆ ವರ್ಕ್ ಫ್ರಂ ಹೋಮ್ಗೆ ನೀಡಿದ ನಿರ್ದೇಶನವನ್ನು ದಿಲ್ಲಿ ಸರಕಾರ ಸೋಮವಾರ ರಾತ್ರಿ ವಿಸ್ತರಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News