ಲೇಖಕ, ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ನಿಧನ

Update: 2021-11-26 05:06 GMT

ಬೆಂಗಳೂರು: ಲೇಖಕ, ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ (88) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು.

ಕೆ.ಎಸ್.ನಾರಾಯಣಾಚಾರ್ಯ ಅವರು, ರಾಮಾಯಣ ಸಹಶ್ರೀ, ಗೀತಾ ರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ, ಅಗಸ್ತ್ಯ, ಶ್ರೀಮಾತೇ ಕುಂತಿ ಕರೆದಾಗ, ಚಾಣಕ್ಯ ನೀತಿ ಸೂತ್ರಗಳು, ಶ್ರೀರಾಮಾವತಾರ ಸಂಪೂರ್ಣವಾದಾಗ, ವನದಲ್ಲಿ ಪಾಂಡವರು, ದಶಾವತಾರ ಸೇರಿದಂತೆ 70ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.

ಕನ್ನಡದ ವಿವಿಧ ಪತ್ರಿಕೆ ಮತ್ತು ವಾರಪತ್ರಿಕೆಗಳಿಗೆ ಅಂಕಣಕಾರರಾಗಿದ್ದರು. ಅವರು, 'ನಡೆದಾಡುವ ವಿಶ್ವಕೋಶ' ಎಂದೇ ಖ್ಯಾತರಾಗಿದ್ದರು. ಕನ್ನಡ, ಸಂಸ್ಕೃತ, ತಮಿಳು, ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಸಾಧಿಸಿದ್ದರು.

ಕೆ.ಎಸ್.ನಾರಾಯಣಾಚಾರ್ಯರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಡಾ.ಅಶ್ವತ್ಥ ನಾರಾಯಣ ಸಂಸದ ನಳಿನ್‍ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ. 

Koo App
ಖ್ಯಾತ ಚಿಂತಕರು, ಸುಪ್ರಸಿದ್ಧ ಲೇಖಕರು, ಮೇರು ವಿದ್ವಾಂಸರಾಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದು, ಅತೀವ ದುಃಖ ತಂದಿದೆ. ಅವರು ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದರು. ಅವರ ನಿಧನವು ಕನ್ನಡ ಸಾರಸ್ವತ ಹಾಗೂ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಕೃತಿಗಳ ಮೂಲಕ ಸದಾಕಾಲ ಅವರ ನೆನಪು ಸದಾಕಾಲ ಉಳಿಯಲಿ ಮತ್ತು ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿಯೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ‌. ಓಂ ಶಾಂತಿಃ - Basavaraj Bommai (@bsbommai) 26 Nov 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News