ಕೋವಿಡ್ ಟೆಸ್ಟ್ ಹೆಚ್ಚಳಕ್ಕೆ ಬಿಬಿಎಂಪಿ ಸಿದ್ಧತೆ: ಜನದಟ್ಟಣೆ ಪ್ರದೇಶದಲ್ಲಿ ಆರೋಗ್ಯ ಸಿಬ್ಬಂದಿ, ಮಾರ್ಷಲ್‍ಗಳ ನಿಯೋಜನೆ

Update: 2021-11-28 18:44 GMT

ಬೆಂಗಳೂರು, ನ. 28: ಜಾಗತಿಕ ಮಟ್ಟದಲ್ಲಿ ಕೊರೊನ ಹೊಸ ತಳಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಶಿಫಾರಸ್ಸಿನಂತೆ ಬಿಬಿಎಂಪಿ ಕೋವಿಡ್ ಉಲ್ಬಣವಾಗದಂತೆ ಮುಂಜಾಗೃತ ಕ್ರಮಕ್ಕೆ ಮುಂದಾಗಿದೆ.

ಪಾಲಿಕೆ ವ್ಯಾಪ್ತಿಯ ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸಲು ಪಾಲಿಕೆಯ ಆರೋಗ್ಯ ಸಿಬ್ಬಂದಿಗಳನ್ನು ಮತ್ತು ಕೋವಿಡ್ ಮಂಜಾಗೃತ ಕ್ರಮಗಳ ಪಾಲನೆಯ ಕುರಿತು ನಿಗಾವಹಿಸಲು ಮೊದಲಿಗಿಂತ ಅಧಿಕ ಮಾರ್ಷಲ್‍ಗಳನ್ನು ನೇಮಿಸಿದೆ. 

ಶನಿವಾರದಂದು ನಡೆದ ಸಭೆಯಲ್ಲಿ ಕೊರೊನ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ತಜ್ಞರು ಸರ್ಕಾರಕ್ಕೆ ಸೂಚಿಸಿದ್ದರು. ಹೀಗಾಗಿ ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳಲು ಸರ್ಕಾರ ಅಧಿಕಾರಿಗಳಿಗೆ ಕೆಲ ಸಲಹೆ ನೀಡಿದೆ. ಜನರಿಗೆ ಮೂರನೇ ಅಲೆ ಹಾಗೂ ಆಫ್ರಿಕಾದಲ್ಲಿ ಹುಟ್ಟಿದ ಹೊಸ ಅಲೆ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದೆ. ಈ ನಿಟ್ಟಿನಲ್ಲಿ ಪಾಲಿಕೆ ಕ್ರಮ ವಹಿಸಿದೆ. ಜೊತೆಗೆ ಮಾಸ್ಕ್ ಹಾಕದವರಿಗೆ ಮಾರ್ಷಲ್ಸ್ ದಂಡ ವಿಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News