ಓಮಿಕ್ರಾನ್ ಪೀಡಿತ ದೇಶಗಳ ಅಂತರ್ ರಾಷ್ಟ್ರೀಯ ವಿಮಾನ ಆಗಮನ ನಿಲ್ಲಿಸಿ: ಪ್ರಧಾನಿಗೆ ಕೇಜ್ರಿವಾಲ್ ಕೋರಿಕೆ

Update: 2021-11-30 07:08 GMT

ಹೊಸದಿಲ್ಲಿ: ಕಳೆದ ವರ್ಷ ಮೊದಲ ಕೋವಿಡ್  ಅಲೆ ದೇಶವನ್ನು ಅಪ್ಪಳಿಸಿದಾಗ ಭಾರತವು ಅಂತರ್ ರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧಗಳನ್ನು ವಿಳಂಬಗೊಳಿಸಿದೆ ಎಂದು ಕೇಂದ್ರ ಸರಕಾರಕ್ಕೆ ಇಂದು ನೆನಪಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೊಸ ಪ್ರಭೇದ  ಒಮಿಕ್ರಾನ್ ನಿಂದ ಪೀಡಿತ ದೇಶಗಳಿಂದ ಅಂತರ್ ರಾಷ್ಟ್ರೀಯ ವಿಮಾನಗಳನ್ನು ನಿಲ್ಲಿಸಿ ಎಂದು ಪ್ರಧಾನಿ ಮೋದಿಯವರನ್ನು ನಾನು ಕೇಳಿಕೊಳ್ಳುತ್ತೇನೆ. ಯಾವುದೇ ವಿಳಂಬ ಕ್ರಮವು ತೀವ್ರ ಹಾನಿವುಂಟು ಮಾಡಬಲ್ಲದು ಎಂದು ಟ್ವೀಟಿಸಿದ್ದಾರೆ.

ಹೊಸ ರೂಪಾಂತರ ಕೋವಿಡ್  'ಓಮಿಕ್ರಾನ್' ಕನಿಷ್ಠ 13 ದೇಶಗಳಲ್ಲಿ ಕಂಡುಬಂದಿದೆ. ಹೊಸ ರೂಪಾಂತರವು ‘ಅತ್ಯಂತ ಹೆಚ್ಚಿನ’ ಜಾಗತಿಕ ಅಪಾಯವನ್ನು ಉಂಟುಮಾಡುತ್ತದೆ ಮತ್ತು ಉಲ್ಬಣಗಳಿರುವಲ್ಲಿ ‘ತೀವ್ರ ಪರಿಣಾಮಗಳನ್ನು’ ಉಂಟುಮಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ಸೋಮವಾರ ಎಚ್ಚರಿಕೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತುರ್ತು ಮನವಿಯನ್ನು ಮಾಡಿದ ಕೇಜ್ರಿವಾಲ್ ಅವರು ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

"ಹಲವು ದೇಶಗಳು ಓಮಿಕ್ರಾನ್ ಪೀಡಿತ ರಾಷ್ಟ್ರಗಳಿಂದ ವಿಮಾನಗಳನ್ನು ನಿರ್ಬಂಧಿಸಿವೆ. ನಾವು ಏಕೆ ವಿಳಂಬ ಮಾಡುತ್ತಿದ್ದೇವೆ?.  ಹೊಸ ರೂಪಾಂತರದ ಕೊರೋನ ಹರಡುವಿಕೆಯನ್ನು ಪರಿಶೀಲಿಸಲು ಇಸ್ರೇಲ್ ಹಾಗೂ  ಜಪಾನ್ ಬೃಹತ್ ಪ್ರಯಾಣ ನಿರ್ಬಂಧಗಳನ್ನು ಘೋಷಿಸಿವೆ. ಮೊದಲ ಕೊರೋನ  ಅಲೆಯಲ್ಲೂ ನಾವು ವಿಮಾನಗಳ ಮೇಲಿನ ನಿಷೇಧವನ್ನು ವಿಳಂಬಗೊಳಿಸಿದ್ದೇವೆ. ಹೆಚ್ಚಿನ ಅಂತರಾಷ್ಟ್ರೀಯ ವಿಮಾನಗಳು ದಿಲ್ಲಿಯಲ್ಲಿ ಇಳಿಯುತ್ತವೆ. ನಗರದ ಮೇಲೆ  ಹೆಚ್ಚು ಪರಿಣಾಮ ಬೀರುತ್ತದೆ. ಪ್ರಧಾನಿಗಳೆ, ದಯವಿಟ್ಟು ವಿಮಾನಗಳನ್ನು ನಿಲ್ಲಿಸಿ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News