ಕನಿಷ್ಠ ಬೆಂಬಲ ಬೆಲೆ, ಇತರ ವಿಷಯಗಳ ಚರ್ಚೆಗೆ ಸಮಿತಿ ರಚನೆಗಾಗಿ 5 ಹೆಸರು ಕೋರಿದ ಕೇಂದ್ರ ಸರಕಾರ

Update: 2021-11-30 17:23 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹಾಗೂ  ಇತರ ವಿಷಯಗಳ ಕುರಿತ ಚರ್ಚೆಗಾಗಿ ಸಮಿತಿಯೊಂದನ್ನು ರಚಿಸಲು 40 ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾದಿಂದ (ಎಸ್‌ಕೆಎಂ) ಐದು ಹೆಸರುಗಳನ್ನು ಕೇಂದ್ರ ಸರಕಾರ ಕೋರಿದೆ. ಡಿಸೆಂಬರ್ 4ರಂದು ನಡೆಯಲಿರುವ ಸಭೆಯಲ್ಲಿ  ಸದಸ್ಯರ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಎಸ್ ಕೆಎಂ ಹೇಳಿದೆ.

ಸಂಸತ್ತಿನ ಎರಡೂ ಸದನಗಳು ಯಾವುದೇ ಚರ್ಚೆಯಿಲ್ಲದೆ ಧ್ವನಿ ಮತಗಳ ಮೂಲಕ 2021 ರ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಅಂಗೀಕರಿಸಿದ ಒಂದು ದಿನದ ನಂತರ ಸರಕಾರ ಈ ಹೆಜ್ಜೆ ಇಟ್ಟಿದೆ.

ಲೋಕಸಭೆಯಲ್ಲಿ ಕೃಷಿ ಕಾಯ್ದೆಗಳ ಚರ್ಚೆಯಾಗಬೇಕೆಂಬ ಪ್ರತಿಪಕ್ಷಗಳ ಬೇಡಿಕೆಗಳ ನಡುವೆ ಕಲಾಪದ ಮೊದಲಾರ್ಧದಲ್ಲಿ ಮಸೂದೆಯನ್ನು ಅಂಗೀಕರಿಸಿತು. ಆದರೆ ರಾಜ್ಯಸಭೆಯಲ್ಲಿ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಮಧ್ಯಾಹ್ನದ ನಂತರದ ಅದನ್ನು ಅಂಗೀಕರಿಸಲಾಯಿತು.

“ಇಂದು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವಿಷಯದ ಬಗ್ಗೆ ಚರ್ಚಿಸುವ ಸಮಿತಿಗೆ ಎಸ್‌ಕೆಎಂನಿಂದ ಐದು ಹೆಸರುಗಳನ್ನು ಕೇಂದ್ರ ಕೇಳಿದೆ. ನಾವು ಇನ್ನೂ ಹೆಸರುಗಳನ್ನು ನಿರ್ಧರಿಸಿಲ್ಲ. ಡಿಸೆಂಬರ್ 4ರ ನಮ್ಮ ಸಭೆಯಲ್ಲಿ ನಾವು ಇದನ್ನು ನಿರ್ಧರಿಸುತ್ತೇವೆ’’ಎಂದು ರೈತ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News