​ಐಐಟಿ ನೇಮಕಾತಿ : ದೇಶೀಯ ವೇತನದಲ್ಲಿ ಹೊಸ ದಾಖಲೆ

Update: 2021-12-02 01:56 GMT

ಮುಂಬೈ: ಕೋವಿಡ್-19 ಸಾಂಕ್ರಾಮಿಕ ವರ್ಷದ ನಿರಾಸೆಯ ಬಳಿಕ ಕೋಟಿಗಿಂತ ಅಧಿಕ ವೇತನ ಪ್ಯಾಕೇಜ್ ಪ್ರಮುಖ ಐಐಟಿ ಕ್ಯಾಂಪಸ್‌ಗಳಿಗೆ ಮರಳಿದೆ. ನೇಮಕಾತಿ ಋತುವಿನ ಮೊದಲ ದಿನ ಒಂದು ಕೋಟಿಗಿಂತ ಅಧಿಕ ವೇತನ ಆಫರ್ ಮಾಡಿದ ಹಲವು ನಿದರ್ಶನಗಳು ವರದಿಯಾಗಿದ್ದು, ಗರಿಷ್ಠ ದೇಶೀಯ ಪ್ಯಾಕೇಜ್ ಸರ್ವಕಾಲಿಕ ದಾಖಲೆ ಎನಿಸಿದ 1.8 ಕೋಟಿಯನ್ನು ತಲುಪಿದೆ. ಅಂತೆಯೇ ಅಂತರರಾಷ್ಟ್ರೀಯ ಆಫರ್ 2 ಕೋಟಿಯ ಗಡಿ ದಾಟಿದೆ.

ಉಬೆರ್ ಸಂಸ್ಥೆ ಮುಂಬೈ ಐಐಟಿ ಮತ್ತು ಮದ್ರಾಸ್ ಐಐಟಿ ಸೇರಿದಂತೆ ಐದು ಐಐಟಿಗಳಿಂದ ತಲಾ ಒಬ್ಬರು ವಿದ್ಯಾರ್ಥಿಗಳನ್ನು 2.05 ಕೋಟಿ ಪ್ಯಾಕೇಜ್‌ಗೆ ನೇಮಕ ಮಾಡಿಕೊಂಡಿದೆ. ರೂರ್ಕೆಲಾ ಐಐಟಿಯ ಒಬ್ಬ ವಿದ್ಯಾರ್ಥಿ 2.15 ಕೋಟಿ ವೇತನದ ಆಫರ್ ಪಡೆದಿದ್ದಾರೆ. ಮೂವರು ಇತರ ವಿದ್ಯಾರ್ಥಿಗಳು 1.30 ಕೋಟಿಯಿಂದ 1.8 ಕೋಟಿಯವರೆಗೆ ದೇಶೀಯ ಆಫರ್ ಗಳಿಸಿದ್ದಾರೆ.

ಮುಂಬೈ ಐಐಟಿಯಲ್ಲಿ ಉಬೆರ್ ಬಳಿಕ ಗರಿಷ್ಠ ಆಫರ್ ನೀಡಿದ ಸಂಸ್ಥೆಯೆಂದರೆ ಡಾಟಾ ನಿರ್ವಹಣೆ ಕಂಪನಿಯದ ರುಬ್ರಿಕ್. ಇದು ಒಬ್ಬ ವಿದ್ಯಾರ್ಥಿಗೆ 90.6 ಲಕ್ಷ ಪ್ಯಾಕೇಜ್ ಘೋಷಿಸಿದೆ. ಕೆಲ ಕಂಪನಿಗಳಿಂದ ಇನ್ನೂ ದೃಢೀಕರಣವನ್ನು ಕಾಯಲಾಗುತ್ತಿದೆ.

ದೇಶೀಯ ಹೊಣೆಗಾರಿಕೆಯಲ್ಲಿ ಮಿಲೇನಿಯಂ ಹೂಡಿಕೆ ನಿರ್ವಹಣೆ ಸಂಸ್ಥೆ 62 ಲಕ್ಷ ರೂಪಾಯಿಗೆ ವಿದ್ಯಾರ್ಥಿಯೊಬ್ಬರನ್ನು ನೇಮಕ ಮಾಡಿಕೊಂಡಿದೆ. ಅಂತೆಯೇ ವರ್ಲ್ಡ್‌ಕ್ವೆಂಟ್ 52.7 ಲಕ್ಷ ಹಾಗೂ ಬ್ಲ್ಯಾಕ್‌ ಸ್ಟೋನ್ 46.6 ಲಕ್ಷ ಆಫರ್ ನೀಡಿವೆ. ಗೂಗಲ್, ಮೈಕ್ರೋಸಾಫ್ಟ್, ಕ್ವೆಲ್‌ಕಾಮ್, ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್, ಏರ್‌ಬಸ್ ಮತ್ತು ಬಿಯಾನ್ ಆ್ಯಂಡ್ ಕಂಪನಿಗಳು ಗರಿಷ್ಠ ಆಫರ್ ನೀಡಿವೆ.

ಐಟಿ/ ಸಾಫ್ಟ್‌ವೇರ್, ಪ್ರಮುಖ ಎಂಜಿನಿಯರಿಂಗ್ ಮತ್ತು ಕನ್ಸಲ್ಟಿಂಗ್ ವಲಯಗಳಿಂದ ಗರಿಷ್ಠ ಆಫರ್‌ಗಳು ಬಂದಿವೆ.
ಐಐಟಿ-ಮದ್ರಾಸ್‌ನಲ್ಲಿ ಮೊದಲ ದಿನ 11 ಅಂತರರಾಷ್ಟ್ರೀಯ ಆಫರ್‌ಗಳು ಬಂದಿವೆ ಎಂದು ತರಬೇತಿ ಮತ್ತು ಸ್ಥಾನೀಕರಣ ಸಲಹೆಗಾರ ಸಿ.ಎಸ್. ಶಂಕರರಾಮ್ ಹೇಳಿದ್ದಾರೆ. 231 ಪಿಪಿಓಗಳು ಸೇರಿದಂತೆ ಒಟ್ಟು 497 ಆಫರ್‌ಗಳು ಸಂಸ್ಥೆಗೆ ಈ ಬಾರಿ ಬಂದಿವೆ. 11 ವಿದ್ಯಾರ್ಥಿಗಳು 1 ಕೋಟಿಗಿಂತ ಅಧಿಕದ ಆಫರ್‌ಗಳನ್ನು ಪಡೆದಿದ್ದು, ಈ ಪೈಕಿ 10 ದೇಶೀಯ ಆಫರ್‌ಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News