ಯುಎಇ ಟಿ-20 ಲೀಗ್ ನ ಕ್ರಿಕೆಟ್ ತಂಡ ಖರೀದಿಸಿದ ಖ್ಯಾತ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಸಹ-ಮಾಲಕ

Update: 2021-12-02 06:21 GMT
ಅವ್ರಾಮ್ ಗ್ಲೇಝರ್ (Photo: Twitter/@Sportskeeda)
 

ದುಬೈ: ಅಗ್ರ ಇಂಗ್ಲೀಷ್ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್‌ನ ಸಹ-ಅಧ್ಯಕ್ಷ ಅವ್ರಾಮ್ ಗ್ಲೇಝರ್ ನೇತೃತ್ವದ ಲ್ಯಾನ್ಸರ್ ಕ್ಯಾಪಿಟಲ್ ಯುಎಇ ಲೀಗ್‌ನಲ್ಲಿ ಫ್ರಾಂಚೈಸಿಯೊಂದನ್ನು ಪಡೆದುಕೊಳ್ಳುವ ಮೂಲಕ ಕ್ರಿಕೆಟ್‌ಗೆ ತನ್ನ ಮೊದಲ ಪ್ರವೇಶವನ್ನು ಮಾಡಿದೆ.

ಯುಎಇ ಟಿ-20 ಲೀಗ್ ಅಧ್ಯಕ್ಷ ಹಾಗೂ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಝರೂನಿ ಅವರು ಗ್ಲೇಝರ್ ಅವರನ್ನು ಸ್ವಾಗತಿಸಿದರು.

ಲ್ಯಾನ್ಸರ್ ಕ್ಯಾಪಿಟಲ್ ವಿವಿಧ ಅತ್ಯುತ್ತಮ-ವರ್ಗದ ಸ್ವತ್ತುಗಳಲ್ಲಿ ಹೂಡಿಕೆಗಳನ್ನು ಹೊಂದಿದೆ. ಗ್ಲೇಝರ್ ಸೂಪರ್ ಬೌಲ್ ಚಾಂಪಿಯನ್ ಟ್ಯಾಂಪಾ ಬೇ ಬುಕಾನಿಯರ್ಸ್‌ನ ಮಾಲಕರಾಗಿದ್ದಾರೆ. ಅವರು 2005 ರಿಂದ ಮ್ಯಾಂಚೆಸ್ಟರ್ ಯುನೈಟೆಡ್‌ನ ಸಹ-ಅಧ್ಯಕ್ಷರಾಗಿದ್ದಾರೆ.

"ಯುಎಇ ಟಿ20 ರಚನೆಯ ಭಾಗವಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಯುಎಇ ಟಿ-20 ಎಮಿರೇಟ್ಸ್‌ನಲ್ಲಿ ಕ್ರಿಕೆಟ್ ಬೆಳವಣಿಗೆಗೆ ರೂಪಾಂತರಗೊಳ್ಳುವ ವಿಶ್ವದರ್ಜೆಯ ಈವೆಂಟ್ ಆಗಲಿದೆ ಎಂಬ ಭರವಸೆ ನೀಡಿದೆ’’ ಎಂದು ಲ್ಯಾನ್ಸರ್ ಕ್ಯಾಪಿಟಲ್ ಅಧ್ಯಕ್ಷ ಗ್ಲೇಝರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News