ಭೀಮಾ ಕೋರೆಗಾಂವ್ ಪ್ರಕರಣ: ಆನಂದ್ ತೇಲ್ತುಂಬ್ಡೆ ತಾತ್ಕಾಲಿಕ ಜಾಮೀನು ಅರ್ಜಿ ತಿರಸ್ಕರಿಸಿದ ಎನ್‌ಐಎ ನ್ಯಾಯಾಲಯ

Update: 2021-12-02 07:13 GMT
ಆನಂದ್ ತೇಲ್ತುಂಬ್ಡೆ (Photo: twitter)

ಹೊಸದಿಲ್ಲಿ: ಮುಂಬೈನ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ನ್ಯಾಯಾಲಯವು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಅವರ ತಾತ್ಕಾಲಿಕ ಜಾಮೀನು ಅರ್ಜಿಯನ್ನು ಬುಧವಾರ ತಿರಸ್ಕರಿಸಿದೆ ಎಂದು Live Law ವರದಿ ಮಾಡಿದೆ.

ತನ್ನ ಸಹೋದರ ಮಿಲಿಂದ್ ತೇಲ್ತುಂಬ್ಡೆ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ನಂತರ ಆನಂದ್ ತೇಲ್ತುಂಬ್ಡೆ ತನ್ನ 90 ವರ್ಷದ ತಾಯಿಯನ್ನು ಭೇಟಿ ಮಾಡಲು 15 ದಿನಗಳ ಜಾಮೀನು ಕೋರಿದ್ದರು.

ನವೆಂಬರ್ 13 ರಂದು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟ 26 ಮಾವೋವಾದಿಗಳಲ್ಲಿ ಮಿಲಿಂದ್ ತೇಲ್ತುಂಬ್ಡೆ ಸೇರಿದ್ದಾರೆ.

ಇಂತಹ ಸಮಯದಲ್ಲಿ ನನ್ನ ಉಪಸ್ಥಿತಿಯು ನನ್ನ ತಾಯಿಗೆ 'ಮಹಾನ್ ನೈತಿಕ ಬೆಂಬಲ' ಮತ್ತು ಕುಟುಂಬ ಸದಸ್ಯರೆಲ್ಲರ ಭೇಟಿಯು ಪ್ರತಿಯೊಬ್ಬರಿಗೂ ಸಾಂತ್ವನವನ್ನು ತರುತ್ತದೆ ಎಂದು ತನ್ನ ಮನವಿಯಲ್ಲಿ ಆನಂದ್ ನ್ಯಾಯಾಲಯಕ್ಕೆ ತಿಳಿಸಿದರು ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News