ನಮ್ಮ ಹೋರಾಟ ಇರಬೇಕಾದ್ದು ಹಸಿವಿನ ವಿರುದ್ಧವೇ ವಿನಃ ಆಹಾರದ ವಿರುದ್ಧ ಅಲ್ಲ: ಡಾ.ಎಚ್.ಸಿ.ಮಹದೇವಪ್ಪ

Update: 2021-12-02 08:08 GMT

ಬೆಂಗಳೂರು, ಡಿ.2: ಈ ದಿನ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು ನೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವಂತಹ ವಿಷಮ ಸಂದರ್ಭದಲ್ಲಿ ನಮ್ಮ ಹೋರಾಟ ಇರಬೇಕಾದ್ದು ಹಸಿವಿನ ವಿರುದ್ಧವೇ ವಿನಃ ಆಹಾರದ ವಿರುದ್ಧ ಅಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಬಡ ಕುಟುಂಬಗಳಲ್ಲಿ ಹಸಿವು ಮತ್ತು ಅಪೌಷ್ಟಿಕತೆಯು ಸದಾ ಮಕ್ಕಳನ್ನು ಬಾಧಿಸುವ ಸಂಗತಿಯಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಹಾಲು ಮೊಟ್ಟೆಯನ್ನು ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ ಬಡತನ, ಹಸಿವು ಮತ್ತು ದಾಸೋಹದ ಕಲ್ಪನೆ ಅರಿಯದ ಮತ್ತು ವೈಜ್ಞಾನಿಕತೆಯನ್ನು ಸದಾ ಕೊಲೆ ಮಾಡುವಂತಹ ವರ್ತನೆ ತೋರುವ ಪಟ್ಟಭದ್ರ ಹಿತಾಸಕ್ತಿಗಳು ಸದಾ ಆಹಾರದ ಮೇಲೆ ದಾಳಿ ನಡೆಸುತ್ತಿರುವುದು ಬೇಸರದ ಮತ್ತು ಅಮಾನವೀಯ ಸಂಗತಿ ಎಂದವರು ಟೀಕಿಸಿದ್ದಾರೆ.

ಅದರಲ್ಲೂ ಮೊಟ್ಟೆ ಎಂಬುದು ಸಸ್ಯಹಾರವೋ ಇಲ್ಲ ಮಾಂಸಹಾರವೋ ಎಂಬ ಚರ್ಚೆ ಜೀವಂತವಾಗಿದ್ದಾಗಲೇ ಮೊಟ್ಟೆಯ ವಿತರಣೆ ಬಗ್ಗೆ ಅಪಸ್ವರ ಎತ್ತುವುದು ಮೂರ್ಖತನದ ಪರಮಾಧಿ. ಸಾಧ್ಯವಾದರೆ ಮಕ್ಕಳಿಗೆ ಉತ್ತಮ ಆಹಾರ ನೀಡಲು ಪ್ರಯತ್ನಿಸಿ, ಇಲ್ಲವೇ ಸುಮ್ಮನಿರಿ ಎಂದು ಡಾ.ಎಚ್.ಸಿ.ಮಹದೇವಪ್ಪ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News