ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ನೇಮಕ

Update: 2021-12-02 10:03 GMT
ಬಿಜೆಪಿ ವಕ್ತಾರ ಸಂಬಿತ್ ಪಾತ್ರ

ಹೊಸದಿಲ್ಲಿ: ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಐಟಿಡಿಸಿ) ಅಧ್ಯಕ್ಷರಾಗಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರನ್ನು ಸಂಪುಟದ ನೇಮಕಾತಿ ಸಮಿತಿ ಬುಧವಾರ ನೇಮಕ ಮಾಡಿದೆ.

ಅಧಿಕೃತ ಆದೇಶದ ಪ್ರಕಾರ  ಕ್ಯಾಬಿನೆಟ್ ನೇಮಕಾತಿ ಸಮಿತಿಯು (ಎಸಿಸಿ) ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ  ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನು ಅಧ್ಯಕ್ಷ, ಐಟಿಡಿಸಿ ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ), ಐಟಿಡಿಸಿ  ಎಂದು ವಿಭಜಿಸುವ ಪ್ರವಾಸೋದ್ಯಮ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ.

ಐಎಎಸ್ ಅಧಿಕಾರಿ ಜಿಕೆವಿ ರಾವ್ ಅವರು ಐಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಡಾ. ಸಂಬಿತ್ ಪಾತ್ರಾ ಅವರು ಐಟಿಡಿಸಿಯ ಅರೆಕಾಲಿಕ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹಾಗೂ  ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ, ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

1990 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಗಂಜಿ ಕಮಲಾ ವಿ. ರಾವ್ ಅವರ ಅಧಿಕಾರಾವಧಿಯನ್ನು ಮುಂದಿನ ಆದೇಶದವರೆಗೆ ಎಂಡಿ, ಐಟಿಡಿಸಿ ಹುದ್ದೆಗೆ ಮುಂದುವರಿಸಿದೆ.

ಈ ಹಿಂದೆ ಪಾತ್ರಾ ಒಎನ್‌ಜಿಸಿಯ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News