ಪ್ರಬಲ ಪ್ರತಿಪಕ್ಷಕ್ಕೆ ಕಾಂಗ್ರೆಸ್‌ ಅತ್ಯಗತ್ಯ. ಆದರೆ...: ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಹೇಳಿದ್ದೇನು?

Update: 2021-12-02 10:44 GMT
ಪ್ರಶಾಂತ್‌ ಕಿಶೋರ್‌ (PTI)

ಹೊಸದಿಲ್ಲಿ: ಪ್ರಬಲ ಪ್ರತಿಪಕ್ಷಕ್ಕೆ ಕಾಂಗ್ರೆಸ್‌ ಅತ್ಯಗತ್ಯ. ಆದರೆ ಯಾವುದೇ ವ್ಯಕ್ತಿ ಅದರ ನಾಯಕತ್ವದ ‘ದೈವಿಕ ಹಕ್ಕನ್ನು’ ಹೊಂದಿಲ್ಲ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಅವರು ರಾಹುಲ್‌ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

"ಕಾಂಗ್ರೆಸ್ ಪ್ರತಿನಿಧಿಸುವ ಐಡಿಯಾ ಹಾಗೂ ಸ್ಪೇಸ್ ಪ್ರಬಲ ಪ್ರತಿಪಕ್ಷಕ್ಕೆ ಅತ್ಯಗತ್ಯ. ಆದರೆ ಕಾಂಗ್ರೆಸ್ ನಾಯಕತ್ವವು ವ್ಯಕ್ತಿಯ ದೈವಿಕ ಹಕ್ಕಲ್ಲ, ವಿಶೇಷವಾಗಿ ಕಳೆದ 10 ವರ್ಷಗಳಲ್ಲಿ ಪಕ್ಷವು 90% ಕ್ಕಿಂತ ಹೆಚ್ಚು ಚುನಾವಣೆಗಳನ್ನು ಕಳೆದುಕೊಂಡಿದೆ. ಪ್ರಜಾಸತ್ತಾತ್ಮಕವಾಗಿ ವಿರೋಧ ಪಕ್ಷದ ನಾಯಕತ್ವವನ್ನು ನಿರ್ಧರಿಸಲಿ" ಎಂದು ಪ್ರಶಾಂತ್ ಕಿಶೋರ್ ಇಂದು ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ಕಿಶೋರ್ ರಾಹುಲ್, ಪ್ರಿಯಾಂಕಾ ಗಾಂಧಿಯವರೊಂದಿಗಿನ ಮಾತುಕತೆ ವಿಫಲವಾದಾಗಿನಿಂದ ಗಾಂಧಿ ಕುಟುಂಬದ  ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಕಿಶೋರ್ ಹಾಗೂ ಮಮತಾ ಬ್ಯಾನರ್ಜಿ ಅವರು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಗೋವಾದಲ್ಲಿ ಕಾಂಗ್ರೆಸ್ ನಾಯಕರಿಗೆ ಬಲೆ ಬೀಸುತ್ತಿದ್ದಾರೆ.

2024ರ ಯಾವುದೇ ವಿರೋಧ ಕಾರ್ಯತಂತ್ರದಲ್ಲಿ ಕಾಂಗ್ರೆಸ್ ದೊಡ್ಡ ಸಹೋದರನ ಪಾತ್ರವನ್ನು ನಿರೀಕ್ಷಿಸಬಹುದು. ಆದರೆ ಅದರ ಪ್ರಸ್ತುತ ನಾಯಕತ್ವದಲ್ಲಿ ಅಲ್ಲ ಎಂದು ಪ್ರಶಾಂತ್ ಕಿಶೋರ್ ನಂಬುತ್ತಾರೆ ಎಂದು ಮೂಲಗಳು ಹೇಳುತ್ತವೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News