​ಬೆಂಗಳೂರು: ಒಮೈಕ್ರಾನ್ ಸೋಂಕಿತ ವೈದ್ಯನ ಸಂಪರ್ಕದಲ್ಲಿದ್ದ ಐದು ಮಂದಿಗೂ ಕೋವಿಡ್ ಪಾಸಿಟಿವ್

Update: 2021-12-03 01:59 GMT

ಬೆಂಗಳೂರು: ಬೆಂಗಳೂರಿನಲ್ಲಿ ಒಮೈಕ್ರಾನ್ ರೂಪಾಂತರಿ ವೈರಸ್ ಸೋಂಕಿತ ವೈದ್ಯನ ಸಂಪರ್ಕದ ಐದು ಮಂದಿಯಲ್ಲೂ ಕೋವಿಡ್-19 ಪಾಸಿಟಿವ್ ಕಂಡುಬಂದಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.

ದೇಶದ ಮೊಟ್ಟಮೊದ ಹೊಸ ಕೋವಿಡ್ ಪ್ರಬೇಧ ಬೆಂಗಳೂರಿನಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದ ಬೆನ್ನಲ್ಲೇ ಐದು ಮಂದಿಯನ್ನು ಐಸೋಲೇಶನ್‌ಗೆ ಒಳಪಡಿಸಿ, ಮಾದರಿಗಳನ್ನು ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ. ಸೋಂಕಿತ ವೈದ್ಯನ 13 ನೇರ ಸಂಪರ್ಕಿತರು ಮತ್ತು 250 ಮಂದಿ ದ್ವಿತೀಯ ಹಂತರ ಸಂಪರ್ಕಿತರನ್ನು ಸರ್ಕಾರ ಪತ್ತೆ ಮಾಡಿದೆ.

ವೈದ್ಯನ ಹೊರತಾಗಿ ಮತ್ತೊಬ್ಬ ಒಮೈಕ್ರಾನ್ ಸೋಂಕಿತ 66 ವರ್ಷದ ದಕ್ಷಿಣ ಆಫ್ರಿಕಾ ಪ್ರಜೆಯಾಗಿದ್ದು, ಕೋವಿಡ್ ನೆಗೆಟಿವ್ ವರದಿಯೊಂದಿಗೆ ಭಾರತಕ್ಕೆ ಆಗಮಿಸಿದ್ದ. ಈತ ಎರಡೂ ಲಸಿಕೆ ಡೋಸ್‌ಗಳನ್ನು ಪಡೆದಿದ್ದ. ಈತ ಆಗಮಿಸಿದ ಸಂದರ್ಭದಲ್ಲಿ ತಪಾಸಣೆ ನಡೆಸಿದಾಗ ಪಾಸಿಟಿವ್ ಕಂಡುಬಂದಿದ್ದು, ಸ್ವಯಂ ಐಸೊಲೇಶನ್‌ಗೆ ಸೂಚಿಸಲಾಗಿತ್ತು. ವಾರದ ಬಳಿಕ ಖಾಸಗಿ ಲ್ಯಾಬ್‌ನಿಂದ ನೆಗೆಟಿವ್ ವರದಿ ಪಡೆದು ದುಬೈಗೆ ಪ್ರಯಾಣಿಸಿದ್ದ.

ಈತನ 24 ಪ್ರಾಥಮಿಕ ಸಂಪರ್ಕ ಹಾಗೂ 240 ಸೆಕೆಂಡರಿ ಸಂಪರ್ಕದವರನ್ನು ತಪಾಸಣೆಗೆ ಗುರಿಪಡಿಸಿದಾಗ ಫಲಿತಾಂಶ ನೆಗೆಟಿವ್ ಬಂದಿದೆ. ಆತಂಕಕಾರಿ ಪ್ರಭೇದ ಎಂದು ಪರಿಗಣಿಸಲಾಗಿರುವ, ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಪ್ರಭೇದ 50ಕ್ಕೂ ಹೆಚ್ಚು ರೂಪಾಂತರವನ್ನು ಹೊಂದಿದೆ ಎನ್ನಲಾಗಿದ್ದು, ಡೆಲ್ಟಾ ಪ್ರಭೇಸಕ್ಕಿಂತ ಹೆಚ್ಚು ಹರಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News