ದಕ್ಷಿಣ ಆಫ್ರಿಕ: ವರ್ಣಬೇಧ ನೀತಿ ವಿರುದ್ಧ ಹೋರಾಡಿದ್ದ ಭಾರತೀಯ ಮೂಲದ ಇಬ್ರಾಹೀಂ ಇಸ್ಮಾಯೀಲ್‌ ನಿಧನ

Update: 2021-12-07 09:21 GMT
Photo: AFP/Twitter/Yeni Özgür Politika

ಹೊಸದಿಲ್ಲಿ: ವರ್ಣಬೇಧ ನೀತಿಯ ವಿರುದ್ಧ ಹೋರಾಡಿದ್ದ  ಹಾಗೂ ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಮತ್ತು ಅಹ್ಮದ್ ಕತ್ರಡಾ ಅವರೊಂದಿಗೆ ರಾಬ್ಬೆನ್ ದ್ವೀಪದಲ್ಲಿ ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ ಭಾರತೀಯ ಮೂಲದ ಎಬ್ರಾಹಿಂ ಇಸ್ಮಾಯಿಲ್ ಎಬ್ರಾಹಿಂ ಅವರು ತಮ್ಮ 84ನೇ ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಬಹಳ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು  ದಕ್ಷಿಣ ಆಪ್ರಿಕಾದ ಆಡಳಿತ ಪಕ್ಷ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ,

ಕಾಮ್ರೇಡ್ ಎಬಿ ಎಂದೇ ಜನಪ್ರಿಯರಾಗಿದ್ದ ಇಸ್ಮಾಯಿಲ್ ಅವರು ಎಎನ್‍ಸಿಯ ಸದಸ್ಯರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರು ಎದುರಿಸುತ್ತಿದ ತಾರತಮ್ಯಕಾರಿ ನಿಲುವನ್ನು ವಿರೋಧಿಸಿ ಅವರು ತಮ್ಮ 13ನೇ ವರ್ಷಕ್ಕೇ ಹೋರಾಟಕ್ಕಿಳಿದಿದ್ದರು. ಮಹಾತ್ಮ ಗಾಂಧೀಜಿಯ ಸತ್ಯಾಗ್ರಹದಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ರಾಬ್ಬೆನ್ ದ್ವೀಪದಲ್ಲಿ ಜೈಲು ವಾಸ ಮುಗಿಸಿ ಹೊರಬಂದ ನಂತರ ನೆಲ್ಸನ್ ಮಂಡೇಲಾ ಅವರು ದಕ್ಷಿಣ ಆಪ್ರಿಕಾದ ಅಧ್ಯಕ್ಷರಾದ ಮೇಲೆ ಇಸ್ಮಾಯಿಲ್ ಅವರು  ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ , ಮಂಡೇಲಾ ಅವರ ಸಂಸದೀಯ ಸಲಹೆಗಾರ ಸಹಿತ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News