ಬೆಂಗಳೂರು: ಶಾಂಗ್ರಿ-ಲಾ ಹೊಟೇಲ್, ಒಮೈಕ್ರಾನ್ ಸೋಂಕು ದೃಢಪಟ್ಟಿದ್ದ ಆಫ್ರಿಕಾ ಪ್ರಜೆ ವಿರುದ್ಧ ಎಫ್‌ಐಆರ್

Update: 2021-12-07 16:51 GMT

ಬೆಂಗಳೂರು, ಡಿ.7: ಒಮೈಕ್ರಾನ್ ಸೋಂಕು ಸಂಬಂಧ ಆಫ್ರಿಕಾ ಪ್ರಜೆಯೊಬ್ಬ ದೇಶ ತೊರೆದಿರುವ ಪ್ರಕರಣಕ್ಕೆ ಸಂಬಂಧಿಸಿ ಹೊಟೀಲ್ ಶಾಂಗ್ರಿ-ಲಾ ಆಡಳಿತ ಮಂಡಳಿ ಮತ್ತು ಆಫ್ರಿಕಾ ಪ್ರಜೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ.ನವೀನ್ ಸಲ್ಲಿಸಿರುವ ದೂರು ಆಧರಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 269, 271, 114 ಅಡಿ ಪ್ರಕರಣ ದಾಖಲಿಸಲಾಗಿದೆ. 

ನ.20ರಂದು ನಗರಕ್ಕೆ ಬಂದಿದ್ದ ಆಫ್ರಿಕಾ ಪ್ರಜೆಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಕೋವಿಡ್ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶಾಂಗ್ರಿ-ಲಾ ಹೊಟೇಲ್‌ನಲ್ಲಿ 14 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ನ.27ಕ್ಕೆ ಹೊಟೇಲ್ ತೊರೆದು ದೇಶ ಬಿಟ್ಟು ಪರಾರಿಯಾಗಿದ್ದಾನೆ. 

ಈ ಬಗ್ಗೆ ಶಾಂಗ್ರಿ-ಲಾ ಹೊಟೇಲ್ ಆಡಳಿತ ಮಂಡಳಿ ಬಿಬಿಎಂಪಿ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಒಮೈಕ್ರಾನ್ ಸೋಂಕಿತ ವಿದೇಶಕ್ಕೆ ಹೇಗೆ ಪರಾರಿಯಾದ, ಹೊಟೇಲ್ ಸಿಬ್ಬಂದಿ ಯಾವ ಕಾರಣಕ್ಕೆ ಹೊರಗೆ ಕಳಿಸಲಾಯಿತು ಎಂದು ಕಾರಣ ಹೇಳಿ ಸ್ಪಷ್ಟನೆ ನೀಡುವಂತೆ ಬಿಬಿಎಂಪಿ ಹೊಟೇಲ್ ಮಾಲಕರಿಗೆ ನೋಟಿಸ್ ನೀಡಿತ್ತು. ನೋಟಿಸ್‌ಗೆ ಸಮರ್ಪಕ ಉತ್ತರ ನೀಡದ ಕಾರಣ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News