ಗೋವಾದ ಮಹಿಳೆಯರಿಗೆ ತಿಂಗಳಿಗೆ 5 ಸಾವಿರ ರೂ. ಕೊಡುಗೆ ಘೋಷಣೆ: ಟಿಎಂಸಿಗೆ ಚಿದಂಬರಂ ತರಾಟೆ

Update: 2021-12-12 09:37 GMT

ಪಣಜಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೋವಾದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ನೇರ ನಗದು ವರ್ಗಾವಣೆ ಯೋಜನೆ ಭರವಸೆ ನೀಡಿದ ಒಂದು ದಿನದ ನಂತರ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಟಿಎಂಸಿ ನಾಯಕಿ  ಮಹುವಾ ಮೊಯಿತ್ರಾ ಅವರು ಶನಿವಾರ ಗೃಹ ಲಕ್ಷ್ಮಿ ಎಂಬ ಯೋಜನೆಯಡಿಯಲ್ಲಿ ತಮ್ಮ ಪಕ್ಷವು ಕರಾವಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹಣದುಬ್ಬರವನ್ನು ಎದುರಿಸಲು ಖಾತರಿಯ ಆದಾಯದ ಬೆಂಬಲವಾಗಿ ಪ್ರತಿ ಮನೆಯ ಮಹಿಳೆಗೆ ತಿಂಗಳಿಗೆ ರೂ. 5,000 ವರ್ಗಾಯಿಸಲಿದೆ ಎಂದು ಹೇಳಿದ್ದರು.

ಈ ಘೋಷಣೆಗೆ ರವಿವಾರ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಗೋವಾ ಚುನಾವಣಾ ಉಸ್ತುವಾರಿ ಚಿದಂಬರಂ,ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಅರ್ಹವಾದ ಗಣಿತ ಇಲ್ಲಿದೆ. ಗೋವಾದ 3.5 ಲಕ್ಷ ಕುಟುಂಬಗಳ ಮಹಿಳೆಗೆ ರೂ. 5000 ಮಾಸಿಕ ಅನುದಾನಕ್ಕೆ ತಿಂಗಳಿಗೆ ರೂ. 175 ಕೋಟಿ ವೆಚ್ಚವಾಗುತ್ತದೆ. ಅಂದರೆ ವರ್ಷಕ್ಕೆ ರೂ. 2100 ಕೋಟಿ.

ಮಾರ್ಚ್ 2020 ರ ಅಂತ್ಯದ ವೇಳೆಗೆ ರೂ. 23,473 ಕೋಟಿಗಳಷ್ಟು ಸಾಲವನ್ನು ಹೊಂದಿರುವ ಗೋವಾ ರಾಜ್ಯಕ್ಕೆ ಇದು "ಸಣ್ಣ" ಮೊತ್ತವಾಗಿದೆ.  ದೇವರು ಗೋವಾವನ್ನು ಆಶೀರ್ವದಿಸಲಿ! ಅಥವಾ ಗೋವಾವನ್ನು ದೇವರೇ ಉಳಿಸಬೇಕೇ? ”ಎಂದು ಮಾಜಿ ಕೇಂದ್ರ ಹಣಕಾಸು ಸಚಿವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News