''ಸಬ್ಕಾ ಸಾಥ್, ಸಬ್ಕಾ ವಿಕಾಸ್" ಘೋಷಣೆ ಅಟಲ್ ಬಿಹಾರಿ ವಾಜಪೇಯಿಗೆ ನಿಜವಾಗಿಯೂ ಒಪ್ಪುತ್ತದೆ:ಸಂಜಯ್ ರಾವತ್

Update: 2021-12-25 07:44 GMT

ಮುಂಬೈ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಶನಿವಾರ ಶ್ಲಾಘಿಸಿದ ಶಿವಸೇನೆ ನಾಯಕ ಸಂಜಯ್ ರಾವತ್, ಜವಾಹರಲಾಲ್ ನೆಹರೂ ನಂತರ ದೇಶಾದ್ಯಂತ ಜನರ ಮೆಚ್ಚುಗೆಗೆ ಪಾತ್ರರಾದ ಏಕೈಕ ನಾಯಕ ವಾಜಪೇಯಿ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಘೋಷಣೆ ನಿಜವಾಗಿಯೂ ಅವರಿಗೆ ಸರಿಹೊಂದುತ್ತದೆ ಎಂದು ಹೇಳಿದರು..

ರಾವತ್ ಅವರ ಹೇಳಿಕೆಯು 'ಸಬ್ಕಾ ಸಾಥ್, ಸಬ್ಕಾ ವಿಕಾಸ್'  ಧ್ಯೇಯವಾಕ್ಯದೊಂದಿಗೆ 2014 ರಲ್ಲಿ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, "ಶಿವಸೇನೆ-ಬಿಜೆಪಿ ಮೈತ್ರಿಯನ್ನು ಗಟ್ಟಿಗೊಳಿಸುವಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಸಾಲು ನಿಜವಾಗಿಯೂ ಅವರಿಗೆ ಸರಿಹೊಂದುತ್ತದೆ’’ ಎಂದು  ದಿವಂಗತ ಬಿಜೆಪಿ ನಾಯಕರ ಜನ್ಮದಿನದಂದು ವಾಜಪೇಯಿ ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ಶಿವಸೇನಾ ಸಂಸದರು ಪ್ರತಿಕ್ರಿಯಿಸಿದರು.

"ಜವಾಹರಲಾಲ್ ನೆಹರು ನಂತರ ದೇಶಾದ್ಯಂತ ಮೆಚ್ಚುಗೆ ಪಡೆದ ಭಾರತದ ಏಕೈಕ ಎರಡನೇ ನಾಯಕ ವಾಜಪೇಯಿ. ಅದು ನಾಗಾಲ್ಯಾಂಡ್ ಅಥವಾ ಪುದುಚೇರಿಯಾಗಿರಲಿ ವಾಜಪೇಯಿ ಅವರನ್ನು ಗೌರವಿಸುವ ಜನರಿದ್ದರು" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News