ಟಿಎಂಸಿ ಗೋವಾ ಘಟಕಕ್ಕೆ ಐವರು ನಾಯಕರ ರಾಜೀನಾಮೆ

Update: 2021-12-25 08:38 GMT

ಪಣಜಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಟಿಎಂಸಿ ಪಕ್ಷವು "ಧರ್ಮದ ಆಧಾರದ ಮೇಲೆ ಗೋವಾವನ್ನು ವಿಭಜಿಸಲು" ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್‌ನ(ಟಿಎಂಸಿ) ಗೋವಾ ಘಟಕಕ್ಕೆ ಸೇರ್ಪಡೆಗೊಂಡಿದ್ದ ಐವರು ರಾಜಕಾರಣಿಗಳು ಶುಕ್ರವಾರ ರಾಜೀನಾಮೆ ನೀಡಿದ್ದಾರೆ ಎಂದು ANI ವರದಿ ಮಾಡಿದೆ.

ಈ ಗುಂಪಿನಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಮಾಜಿ ಶಾಸಕ ಲಾವೂ ಮಾಮ್ಲೇದಾರ್ ಅವರು ಮೂರು ತಿಂಗಳ ಹಿಂದಷ್ಟೇ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ರಾಮ್ ಮಾಂಡ್ರೇಕರ್, ಕಿಶೋರ್ ಪರ್ವಾರ್, ಕೋಮಲ್ ಪರ್ವಾರ್ ಹಾಗೂ  ಸುಜಯ್ ಮಲ್ಲಿಕ್ ರಾಜೀನಾಮೆ ನೀಡಿದ ಇತರ ನಾಲ್ವರು ನಾಯಕರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬರೆದ ಪತ್ರದಲ್ಲಿ ಐವರು ನಾಯಕರು ತೃಣಮೂಲ ಕಾಂಗ್ರೆಸ್ ಚುನಾವಣೆಗೆ ಮುನ್ನ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಟೀಕಿಸಿದ್ದಾರೆ.

ಈ ಕ್ರಮವು ಸಂಪೂರ್ಣವಾಗಿ ಕೋಮುವಾದ ಮತ್ತು ಹಿಂದೂ ಮತಗಳನ್ನು ಎಂಜಿಪಿ (ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ) ಕಡೆಗೆ ಮತ್ತು ಕ್ಯಾಥೋಲಿಕ್ ಮತಗಳನ್ನು ಎಐಟಿಸಿ (ಅಖಿಲ ಭಾರತ ತೃಣಮೂಲ ಕಾಂಗ್ರೆಸ್) ಕಡೆಗೆ ಧ್ರುವೀಕರಿಸುವ ಉದ್ದೇಶವಾಗಿದೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News