ಬಿಜೆಪಿ ಫಂಡ್‌ ಗೆ 1,000 ರೂ. ದೇಣಿಗೆ ನೀಡಿ, ಪಕ್ಷವನ್ನು ಬಲಪಡಿಸುವಂತೆ ಕರೆ ನೀಡಿದ ಪ್ರಧಾನಿ ಮೋದಿ

Update: 2021-12-25 12:33 GMT

ಹೊಸದಿಲ್ಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಬಿಜೆಪಿ ಶನಿವಾರ "ವಿಶೇಷ ಸಣ್ಣ ದೇಣಿಗೆ ಅಭಿಯಾನ"ವನ್ನು ಪ್ರಾರಂಭಿಸಿದೆ. ಅದರ ಸದಸ್ಯರು ಮತ್ತು ಇತರರಿಂದ ಸಣ್ಣ ಕೊಡುಗೆಗಳ ಮೂಲಕ ನಿಧಿ ಸಂಗ್ರಹಿಸಲು ಪ್ರಯತ್ನಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಪಕ್ಷದ ಫಂಡ್‌ ಗೆ ದೇಣಿಗೆ ನೀಡಿ ಇತರರಿಗೆ ಕೊಡುಗೆ ನೀಡುವಂತೆ ಒತ್ತಾಯಿಸಿದರು.

"ನಾನು ಭಾರತೀಯ ಜನತಾ ಪಕ್ಷದ ಪಕ್ಷದ ನಿಧಿಗೆ 1,000 ರೂ. ದೇಣಿಗೆ ನೀಡಿದ್ದೇನೆ. ದೇಶಕ್ಕೆ ಯಾವಾಗಲೂ ಪ್ರಥಮ ಸ್ಥಾನ ನೀಡುವ ನಮ್ಮ ಆದರ್ಶ ಮತ್ತು ನಮ್ಮ ಕಾರ್ಯಕರ್ತರ ಆಜೀವ ನಿಸ್ವಾರ್ಥ ಸೇವೆಯ ಸಂಸ್ಕೃತಿಯು ನಿಮ್ಮ ಸಣ್ಣ ದೇಣಿಗೆಯಿಂದ ಮತ್ತಷ್ಟು ಬಲಗೊಳ್ಳುತ್ತದೆ. ಬಿಜೆಪಿಯನ್ನು ಬಲಪಡಿಸಲು ಸಹಾಯ ಮಾಡಿ. ಭಾರತವನ್ನು ಬಲಿಷ್ಠವಾಗಿಸಲು ಸಹಾಯ ಮಾಡಿ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, "ನಮ್ಮ ಕಾರ್ಯಕರ್ತರು ಈ ಸಣ್ಣ ದೇಣಿಗೆ ಅಭಿಯಾನದ ಮೂಲಕ ಲಕ್ಷಾಂತರ ಜನರೊಂದಿಗೆ ಸಂಪರ್ಕ ಸಾಧಿಸುತ್ತಾರೆ. ನಮೋ ಆ್ಯಪ್‌ನಲ್ಲಿರುವ 'ದೇಣಿಗೆ' ಮಾಡ್ಯೂಲ್ ಈ ದೇಣಿಗೆಗಳನ್ನು ಸಂಗ್ರಹಿಸುವ ಮಾಧ್ಯಮವಾಗಿದೆ.ವಿಶ್ವದ ಅತಿದೊಡ್ಡ ರಾಷ್ಟ್ರೀಯತಾವಾದಿ ಚಳುವಳಿಯ ಬಲಪಡಿಸಲು ನಾನು ಜನರ ಆಶೀರ್ವಾದವನ್ನು ಕೋರುತ್ತೇನೆ" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News