ಎಲ್ಲಾ ಕೋವಿಡ್ ಲಸಿಕೆಗಳು ರೋಗದ ತೀವ್ರತೆ ತಗ್ಗಿಸುತ್ತದೆ, ಸೋಂಕು ತಡೆಯುವುದಿಲ್ಲ: ಐಸಿಎಂಆರ್ ಮುಖ್ಯಸ್ಥ

Update: 2021-12-31 12:25 GMT

ಹೊಸದಿಲ್ಲಿ: ಎಲ್ಲಾ ಕೋವಿಡ್-19 ಲಸಿಕೆಗಳು ಮೂಲತಃ ರೋಗದ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ ಹಾಗೂ ಸೋಂಕನ್ನು ತಡೆಯುವುದಿಲ್ಲ, ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮುಖ್ಯಸ್ಥ ಬಲರಾಮ್ ಭಾರ್ಗವ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

"ಎಲ್ಲಾ ಕೋವಿಡ್ ಲಸಿಕೆಗಳು, ಅವುಗಳು ಭಾರತ, ಇಸ್ರೇಲ್, ಅಮೆರಿಕಾ, ಯುರೋಪ್, ಇಂಗ್ಲೆಂಡ್ ಅಥವಾ ಚೀನಾದ್ದಾಗಿರಬಹುದು, ಮೂಲತಃ ಅವುಗಳ ರೋಗದ ತೀವ್ರತೆಯನ್ನು ತಗ್ಗಿಸುತ್ತವೆ.ಅವುಗಳು ಸೋಂಕನ್ನು ತಡೆಯುವುದಿಲ್ಲ.  ಮುಂಜಾಗರೂಕತಾ ಡೋಸ್ ಮೂಲತಃ  ಸೋಂಕಿನ ತೀವ್ರತೆ, ಆಸ್ಪತ್ರೆಗೆ ದಾಖಲಾಗುವಿಕೆ ಮತ್ತು ಸಾವನ್ನು ತಪ್ಪಿಸುತ್ತದೆ" ಎಂದು ಅವರು ಹೇಳಿದರು.

ಜನರು ಯಾವಾಗಲೂ ಮಾಸ್ಕ್ ಧರಿಸಬೇಕು ಹಾಗೂ ಲಸಿಕೆ ತೆಗೆದುಕೊಂಡ ನಂತರವೂ ತುಂಬಾ ಜನ ಸೇರುವ ಸ್ಥಳಗಳನ್ನು ತಪ್ಪಿಸಬೇಕು. ಎಂದು ಅವರು ಹೇಳಿದರು.

ಮುಂಜಾಗರೂಕತಾ ಅಥವಾ ಪ್ರಿಕಾಶನರಿ ಕೋವಿಡ್ ಲಸಿಕೆಯ ಡೋಸ್, ಸಂಬಂಧಿತರು ಮೊದಲು ತೆಗೆದುಕೊಂಡ ಲಸಿಕೆಯೇ ಆಗಿರಬೇಕೇ ಅಥವಾ ಬೇರೆ ಲಸಿಕೆ ಆಗಬೇಕೇ ಎಂಬ ಬಗ್ಗೆ ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News