ನೈಟ್ ಕರ್ಫ್ಯೂ ಉಲ್ಲಂಘನೆ: ಬೆಂಗಳೂರಿನಲ್ಲಿ 318 ವಾಹನ ಜಪ್ತಿ

Update: 2022-01-01 16:37 GMT

ಬೆಂಗಳೂರು, ಜ.1: ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿದ ವಾಹನಗಳ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ನೈಟ್ ಕರ್ಫ್ಯೂ ಜಾರಿಯಾದಾಗಿನಿಂದ 318 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸರು ಹೇಳಿದ್ದಾರೆ.

ಶುಕ್ರವಾರ ರಾತ್ರಿ ನೈಟ್ ಕರ್ಫ್ಯೂ ಉಲ್ಲಂಘಿಸಿದ 26 ದ್ವಿಚಕ್ರ ವಾಹನಗಳು, ಐದು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಈವೆರೆಗೂ ಈಶಾನ್ಯ ವಿಭಾಗದಲ್ಲಿ 57, ಪಶ್ಚಿಮ ವಿಭಾಗದಲ್ಲಿ 113, ಉತ್ತರ ವಿಭಾಗದಲ್ಲಿ 12, ಕೇಂದ್ರ ವಿಭಾಗದಲ್ಲಿ 136 ಒಟ್ಟು ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ನೈಟ್ ಕರ್ಫ್ಯೂ ಜಾರಿಯಾದಾಗಿನಿಂದ ಒಟ್ಟು 280 ದ್ವಿಚಕ್ರ ವಾಹನ, 10 ಆಟೋಗಳು, 28 ಕಾರುಗಳನ್ನು ವಶ ಪಡಿಸಿಕೊಂಡಿರುವುದಾಗಿ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News