ಬೆಂಗಳೂರು: ಜ.15ರವರೆಗೆ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆ

Update: 2022-01-01 17:40 GMT

ಬೆಂಗಳೂರು, ಜ.1: 2021-22ನೇ ಸಾಲಿನ ಶಾಲಾ-ಕಾಲೇಜು ಶುಲ್ಕ ರಶೀದಿ ಅಥವಾ ಗುರುತಿನ ಚೀಟಿಯೊಂದಿಗೆ ಬಸ್ ಪಾಸ್ ಮಾಡಿಸದ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸುವ ಅವಧಿಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜನವರಿ 15 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಪ್ರೌಢಶಾಲಾ, ಪಿಯುಸಿ, ಐಟಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ, ಸಂಜೆ ಕಾಲೇಜು ಹಾಗೂ ಪಿಎಚ್.ಡಿ ವಿದ್ಯಾರ್ಥಿಗಳು ಕಾರಣಾಂತರಗಳಿಂದ ಉಚಿತ ಬಸ್ ಪಾಸ್‍ಗಳನ್ನು ಮಾಡಿಸದಿದ್ದ ಪಕ್ಷದಲ್ಲಿ, ಜ.15ರೊಳಗಾಗಿ ಪಾಸ್ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲಿಯವರೆಗೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಆದೇಶದಲ್ಲಿ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News