ಕೇಂದ್ರದ ಅನುದಾನ 'ಕಡಿತ'ದಿಂದ ಹಲವು ಯುಜಿಸಿ ಸಂಶೋಧನಾ ಯೋಜನೆಗಳು ಸ್ಥಗಿತ

Update: 2022-01-06 12:04 GMT

ಹೊಸದಿಲ್ಲಿ : ಕೇಂದ್ರ ಸರಕಾರದಿಂದ ಸಾಕಷ್ಟು ಅನುದಾನ ದೊರೆತಿಲ್ಲವೆಂಬ ಕಾರಣಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹಲವಾರು ಸಂಶೋಧನಾ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು Telegraphindia.com ವರದಿ ಮಾಡಿದೆ.

ಯುಜಿಸಿಯ ಮೇಜರ್ ರಿಸರ್ಚ್ ಪ್ರಾಜೆಕ್ಟ್ ಅಥವಾ ಪ್ರಮುಖ ಸಂಶೋಧನಾ ಯೋಜನೆಗೆ ಕಳೆದ ಐದು ವರ್ಷಗಳಿಂದ ಅನುದಾನ ಕಡಿಮೆಯಾಗುತ್ತಲೇ ಇದ್ದು, ಈ ಯೋಜನೆ ʼಕ್ಲೋಸ್ಡ್' ಅಥವಾ ಅಂತ್ಯವಾಗಿದೆ ಎಂಬ ಕಾರಣಕ್ಕೆ ಅನುದಾನ ಕಡಿಮೆಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.

ಹಲವಾರು ಸಂಶೋಧಕರು ತಮ್ಮ ಸಂಶೋಧನೆ ಪೂರ್ಣಗೊಳಿಸುತ್ತಿದ್ದಂತೆಯೇ ಹೊಸ ಸಂಶೋಧಕರಿಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಸಂಶೋಧನಾ ಪ್ರಸ್ತಾವನೆಗಳು ನಿರೀಕ್ಷಿತ ಗುಣಮಟ್ಟ ಹೊಂದಿಲ್ಲದೇ ಇರುವುದರಿಂದ  ಹೀಗಾಗಿದೆ ಎಂದು ಶಿಕ್ಷಣತಜ್ಞರೊಬ್ಬರು ಹೇಳಿದ್ದಾರೆ. ಆದರೆ ಈ ಕುರಿತು ಯುಜಿಸಿ ಇನ್ನೂ ಪ್ರತಿಕ್ರಿಯಿಸಿಲ್ಲ.

ಯುಜಿಸಿ ವೆಬ್‍ಸೈಟ್‍ನಲ್ಲಿನ ಮಾಹಿತಿಯಂತೆ ಕನಿಷ್ಠ ಅರ್ಧ ಡಜನ್ ಸಂಶೋಧನೆ ಪ್ರೋತ್ಸಾಹಕ ಯೋಜನೆಗಳನ್ನು ಕೈಬಿಡಲಾಗಿದೆ. ಎಮೆರಿಟಸ್ ಫೆಲ್ಲೋಶಿಪ್, ಡಾ ಎಸ್ ರಾಧಾಕೃಷ್ಣನ್ ಪೋಸ್ಟ್ ಡಾಕ್ಟೋರಲ್ ಫೆಲ್ಲೋಶಿಪ್ ಇನ್ ಹ್ಯುಮಾನಿಟೀಸ್ ಎಂಡ್ ಸೋಶಿಯಲ್ ಸಾಯನ್ಸಸ್,  ಮಹಿಳಾ ಅಭ್ಯರ್ಥಿಗಳಿಗೆ, ಪರಿಶಿಷ್ಟ ಜಾತಿ, ವರ್ಗಗಳ ಅಭ್ಯರ್ಥಿಗಳಿಗೆ ಪೋಸ್ಟ್ ಡಾಕ್ಟೋರಲ್ ಫೆಲ್ಲೋಶಿಪ್‍ಗಳನ್ನು ʼಕ್ಲೋಸ್ಡ್' ಎಂದು ವೆಬ್‍ಸೈಟ್ ತಿಳಿಸುತ್ತದೆ.

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿನ ನ್ಯಾಷನಲ್ ಫೆಲ್ಲೋಶಿಪ್ ಕೂಡ 2018-19ರಿಂದ ನಿಲ್ಲಿಸಲಾಗಿದೆ ಎಂದು ವೆಬ್‍ಸೈಟ್ ತಿಳಿಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News