ಭಾಷೆ ಸಮಸ್ಯೆಯನ್ನು ಉಂಟು ಮಾಡಲಲ್ಲ, ಸಹಕಾರಕ್ಕಾಗಿ ಸೃಷ್ಟಿಯಾಗಿದೆ: ಡಾ. ಬಂಜಗೆರೆ ಜಯಪ್ರಕಾಶ್

Update: 2022-01-11 16:10 GMT

ಬೆಂಗಳೂರು, ಜ.11: ಭಾಷೆಯನ್ನು ಒಂದೇ ಸಮಾಜವಾಗಲಿ, ವರ್ಗವಾಗಲಿ ನಿರ್ಮಿಸಿಲ್ಲ. ಸಮಾಜ ಅಭಿವೃದ್ಧಿಗಾಗಿ, ಸಮಾಜವಾದಕ್ಕಾಗಿ ಭಾಷೆಯು ನಿರ್ಮಾಣವಾಗಿದೆ. ಹಾಗಾಗಿ ಭಾಷೆಯು ಸಮಸ್ಯೆಯನ್ನು ಉಂಟು ಮಾಡಲು ಸೃಷ್ಟಿಯಾಗಿಲ್ಲ, ಬದಲಾಗಿ ಸಹಕಾರಕ್ಕಾಗಿ ಸೃಷ್ಟಿಯಾಗಿದೆ ಎಂದು ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ ಪಟ್ಟರು.

ಮಂಗಳವಾರ ನಗರದ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನ ಡಾ.ಎಚ್.ಎನ್. ಸಭಾಂಗಣದಲ್ಲಿ ಆಯೋಜಿಸಿದ್ದ ರಂಗನಾಥ ಕಂಟಕನಕುಂಟೆ ಬರೆದಿರುವ ಕೊಲುವೆನೆಂಬ ಬಾಶೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜವನ್ನು ನಿಯಂತ್ರಿಸಲು ಪ್ರಭುತ್ವವು ರೂಪುಗೊಂಡಿದೆ. ಹಾಗಾಗಿ ಪ್ರಭುತ್ವವು ಯಥಾಸ್ಥಿತಿಯನ್ನು ಹೇಳಲು ಪ್ರಯತ್ನಿಸಿದರೆ, ಸಾಹಿತಿ ಸಮಾಜವು ಹೇಗಿರಬೇಕು ಎಂದು ಹೇಳಲು ಬಯಸುತ್ತಾನೆ. ಈ ನಿಟ್ಟಿನಲ್ಲಿ ಅವೆರಡರ ನಡುವೆ ವೈವಿಧ್ಯತೆ ಉಂಟಾಗಿದೆ ಎಂದು ಹೇಳಿದರು.

ಭಾಷೆಯನ್ನು ಒಂದೇ ಸಮಾಜವಾಗಲಿ, ವರ್ಗವಾಗಲಿ ನಿರ್ಮಿಸಿಲ್ಲ. ಸಮಾಜ ಅಭಿವೃದ್ಧಿಗಾಗಿ, ಸಮಾಜವಾದಕ್ಕಾಗಿ ಭಾಷೆಯು ನಿರ್ಮಾಣವಾಗಿದೆ. ಹಾಗಾಗಿ ಭಾಷೆಯು ಸಮಸ್ಯೆಯನ್ನು ಉಂಟು ಮಾಡಲು ಸೃಷ್ಟಿಯಾಗಿಲ್ಲ, ಬದಲಾಗಿ ಸಹಕಾರಕ್ಕಾಗಿ ಸೃಷ್ಟಿಯಾಗಿದೆ. ಆದರೆ ಪ್ರಸ್ತುತ ದಿನದಲ್ಲಿ ಸಹಕಾರಕ್ಕೆ ಹೊರತಾಗಿ ಭಾಷೆ ಬಳಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಭಾಷೆಯು ಒಂದು ಉತ್ಪಾದನೆಗೆ ಸಲಕರಣೆಯಂತೆ ಬಳಕೆಯಾಗುತ್ತಿದೆ. ಹೆಚ್ಚುತ್ತಿರುವ ಅಕ್ಷರಜ್ಞಾನ, ಮಾಧ್ಯಮಗಳ ಬಳಕೆಯಲ್ಲಿ ಭಾಷೆ ವಿಸ್ತಾರವಾದ ನೆಲೆಯನ್ನು ಕಂಡುಕೊಂಡಿದೆ ಎಂದರು. 

ಕಾರ್ಯಕ್ರಮದಲ್ಲಿ ಚಿಂತಕ ಶ್ರೀಪಾದ ಭಟ್, ಸಂಶೋಧಕ ವಿ.ಎಲ್.ನರಸಿಂಹಮೂರ್ತಿ, ಲೇಖಕ ರಂಗನಾಥ ಕಂಟನಕುಂಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News